ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ

ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ

Published : Dec 18, 2025, 07:46 PM ISTUpdated : Dec 18, 2025, 07:47 PM IST

ಬಿಗ್ ಬಾಸ್ ಮನೆಯಲ್ಲಿ ಈ ವಾರವಿಡಿ ಜೋರಾದ ಜಟಾಪಟಿ ನಡೆದಿವೆ. ಸೀಕ್ರೆಟ್ ರೂಮ್ನಲ್ಲಿ ಕುಳಿತಿರೋ ರಕ್ಷಿತಾ ಮತ್ತು ಧ್ರುವಂತ್ , ಮನೆಯೊಳಗೆ ಕ್ಯಾಪ್ಟನ್ಸಿ ಟಾಸ್ಕ್ ಯಾರು ಆಡಬೇಕು ನಿರ್ಧಾರ ಮಾಡ್ತಾ ಇದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರವಿಡಿ ಜೋರಾದ ಜಟಾಪಟಿ ನಡೆದಿವೆ. ಸೀಕ್ರೆಟ್ ರೂಮ್ನಲ್ಲಿ ಕುಳಿತಿರೋ ರಕ್ಷಿತಾ ಮತ್ತು ಧ್ರುವಂತ್ , ಮನೆಯೊಳಗೆ ಕ್ಯಾಪ್ಟನ್ಸಿ ಟಾಸ್ಕ್ ಯಾರು ಆಡಬೇಕು ನಿರ್ಧಾರ ಮಾಡ್ತಾ ಇದ್ದಾರೆ. ಇತ್ತ ಕ್ಯಾಪ್ಟೆನ್ಸಿ ಟಾಸ್ಕ್ ಆಡುವವರ ನಡುವೆ ದೊಡ್ಡ ಮಾರಾಮಾರು ನಡೀತಾ ಇದೆ. ಯೆಸ್ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಜಸ್ಟ್ 4 ವಾರಗಳು ಬಾಕಿ ಇವೆ. ಸೋ ದೊಡ್ಮನೆ ಸ್ಪರ್ಧಿಗಳು ಈ ವಾರದ ಕ್ಯಾಪ್ಟೆನ್ಸಿ ಪಡೆದ್ರೆ, ಇನ್ನೊಂದು ವಾರ ಇಮ್ಯುನಿಟಿ ಸಿಗುತ್ತೆ ಅನ್ನೋ ಕಾರಣಕ್ಕೆ ಜಿದ್ದಿಗೆ ಬಿದ್ದು ಆಟ ಆಡ್ತಾ ಇದ್ದಾರೆ. ಅತ್ತ ಸೀಕ್ರೆಟ್ ರೂಮ್ನಲ್ಲಿ ಕುಳಿತಿರೋ ಧ್ರುವಂತ್ ಮತ್ತು ರಕ್ಷಿತಾ ಈ ಕ್ಯಾಪ್ಟೆನ್ಸಿ ಟಾಸ್ಕ್ ಯಾರು ಆಡಬೇಕು ಅಂತ ನಿರ್ಧಾರ ಮಾಡ್ತಾ ಇದ್ದಾರೆ.

ಇತ್ತ ಕ್ಯಾಪ್ಟನ್ಸಿ ಟಾಸ್ಕ್ ಅಕ್ಷರಶಃ ಯುದ್ಧದಂತೆ ನಡೀತಾ ಇದೆ. ಮೊದಲ ಟಾಸ್ಕ್ ನಲ್ಲಿ ಮೈ, ಕೈ ಪರಚಿಕೊಂಡು ರಕ್ತಬರಿಸಿಕೊಂಡು ಕಾದಾಡಿದ್ರು ಅಶ್ವಿನಿ ಮತ್ತು ಚೈತ್ರಾ. ಮತ್ತೀಗ ಒನ್ಸ್ ಅಗೈನ್ ಟಾಸ್ಕ್ ವಿಚಾರವಾಗಿ ಕಾವ್ಯಾ ಮತ್ತು ಅಶ್ವಿನಿ ನಡುವೆ ದೊಡ್ಡ ಜಗಳ ನಡೆದಿದೆ. ಟಾಸ್ಕ್‌ನಲ್ಲಿ ಶುರುವಾದ ಗಲಾಟೆ ಮುಂದುವರೆದಿದ್ದು ಕಾವ್ಯಾ ಮತ್ತು ಅಶ್ವಿನಿ ಶರಪರ ಕಿತ್ತಾಡಿಕೊಂಡಿದ್ದಾರೆ. ನೀವು ಯಾವತ್ತೂ ಬದಲಾಗಲ್ಲ.. ನಾಯಿ ಬಾಲ ಎಂದೆಂದೂ ಡೊಂಕೆ ಅಂತ ಅಶ್ವಿನಿಯನ್ನ ನಿಂದಿಸಿದ್ದಾರೆ ಕಾವ್ಯಾ. ಹೌದು ಕಳೆದ ಸೀಸನ್ ಸ್ಪರ್ಧಿಗಳಾಗಿದ್ದ ರಜತ್ ಮತ್ತು ಚೈತ್ರಾ ಈ ಸೀಸನ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿದ್ದಾರೆ. ಆರಂಭದಲ್ಲೂ ಈ ಇಬ್ಬರೂ ಒಬ್ಬರೇ ಅನ್ನೋ ರೀತಿ ಆಟ ಆಡ್ತಾ ಇದ್ರು.

ಆದ್ರೆ ಟಾಸ್ಕ್ ವಿಚಾರವಾಗಿ ಇಬ್ಬರ ನಡುವೆ ಜೋರು ಜಟಾಪಟಿ ನಡೆದಿದೆ. ಟಾಸ್ಕ್ ಮುಗಿದರೂ ರಜತ್ - ಚೈತ್ರಾ ಗಲಾಟೆ ಮಾತ್ರ ನಿಂತಿಲ್ಲ. ಈ ನಡುವೆ ಇಬ್ಬರ ನಡುವೆ ತಂದಿಕ್ಕಿ ಗಿಲ್ಲಿ ಸಖತ್ ತಮಾಷೆ ಮಾಡಿದ್ದಾನೆ. ಚೈತ್ರಾಳ ಕೂಗಾಟ ಕಂಡು ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ. ಇನ್ನೂ ಅತ್ತ ಸೀಕ್ರೆಟ್ ರೂಮ್ನಲ್ಲೂ ರಕ್ಷಿತಾ ಮತ್ತು ಧ್ರುವಂತ್ ನಡುವೆ ಕೂಡ ಗಲಾಟೆ ನಡೀತಾನೆ ಇದೆ. ಸೀಕ್ರೆಟ್ ರೂಮ್ನಿಂದ ಹೊರಬಂದರೆ ಸಾಕು ಅಂತ ರಕ್ಷಿತಾ ಕಾಯ್ತಾ ಇದ್ದಾಳೆ.  ಒಟ್ಟಾರೆ ಬಿಗ್ ಬಾಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬರ್ತಾ , ಆಟ ದಿನೇ ದಿನೇ ರಂಗೇರ್ತಾ ಇದೆ. ಟಾಸ್ಕ್ಗಳು ಪಕ್ಕಾ ಆಕ್ಷನ್ ಸಿಕ್ವೆನ್ಸ್‌ನಂತೆ ಆಗ್ತಾ ಇವೆ. ಬಿಗ್ ಬಾಸ್ ಆಟ ಆಕ್ಷನ್ ಸಿನಿಮಾದಂತೆ ಕಾಣ್ತಾ ಇದೆ.

23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more