‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದು, ಹೀರೋ ಆಗಲ್ಲ ಎಂದ ಬಿಗ್‌ ಬಾಸ್‌ ಹನುಮಂತ!

‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದು, ಹೀರೋ ಆಗಲ್ಲ ಎಂದ ಬಿಗ್‌ ಬಾಸ್‌ ಹನುಮಂತ!

Published : Mar 20, 2025, 04:35 PM ISTUpdated : Mar 20, 2025, 04:41 PM IST

ಹನುಮಂತ ಈಗ ಉತ್ತರ ಕರ್ನಾಟಕದ ಜಾತ್ರೆ, ಉತ್ಸವಗಳು, ಊರಹಬ್ಬಗಳಿಗೆ ಕರೆದಾಗ ಒಲ್ಲೆ ಎನಲಾರದೇ ಎಲ್ಲ ಕಡೆಯೂ ಹೋಗಿ ಬರುತ್ತಾರೆ, ಇತ್ತೀಚಿಗೆ ಸಾಲು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹಾಡಿ ರಂಜಿಸುತ್ತಾರೆ. 

ಬಿಗ್ ಬಾಸ್ ವಿನ್ನರ್ ಹನುಮಂತ ಹೊಸ ಗೆಟಪ್​​ನಲ್ಲಿ ಪೋಸ್ ಕೊಟ್ಟಿದ್ದಾನೆ. ಮಸ್ತ್ ಕಾಸ್ಟ್ಯೂಮ್ ತೊಟ್ಟು ‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದಿದ್ದಾನೆ. ಹಾಗಾದ್ರೆ ಹನುಮಂತ ಹೀರೋ ಆಗೇಬಿಟ್ನಾ..? ಬಿಗ್ ಬಾಸ್ ಬಳಿಕ ಹನುಮಂತ ಏನ್ ಮಾಡ್ತಿದ್ದಾನೆ..? ಚಿಲ್ಲೂರ ಬಡ್ನಿ ಚಿಂಗಾರಿ ಲೈಫ್​ನಲ್ಲಿ ಏನೆಲ್ಲಾ ನಡೀತಾ ಇದೆ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ನೀನೇನು ಸ್ಪರ್ಧಿನೋ ಇಲ್ಲಾ ಅತಿಥಿನೋ ಅಂದ್ರೆ ‘ಏನ್ ಮಾಡೋದ್ರಿ ಸಿಕ್ಕಾಪಟ್ಟೆ ಪ್ರೊಗ್ರಾಮ್ ಇದಾವ.. ಯಾವುದಕ್ಕೆ ಹೋಗೋದು ಯಾವುದಕ್ಕೆ ಬಿಡೋದು.. ಗೊತ್ತಾಗವಲ್ತು ನೋಡ್ರಿ ಅಂತಾನೇ ಹನುಮಂತ. ಹೌದು ಬಿಗ್ ಬಾಸ್ ವಿನ್ನರ್ ಆದ ಮೇಲೆ ಉತ್ತರ ಕರ್ನಾಟಕದಲ್ಲಿ ಯಾವುದೇ ಪ್ರೋಗ್ರಾಮ್ ಇದ್ರೂ ಹನುಮಂತ ಫಿಕ್ಸ್ ಅತಿಥಿ. ಬೇರೆ ಯಾರೇ ಆದ್ರೂ ಹೀರೋ ಆಗೋ ಅವಕಾಶನಾ ಬೇಡ ಅಂತಾರಾ..? ಆದ್ರೆ ಹನುಮಂತ ಮಾತ್ರ ಅಷ್ಟು ಸೀದಾ ಸಾದಾ. ಇದೆಲ್ಲಾ ನನಗೆ ಬೇಡ ಅನ್ನೋದು ಇವನ ದೃಡ ತೀರ್ಮಾನ.  ಹಾಗಂತ ಹನುಮಂತನಿಗೇನೂ ನಟನೆ ಬರಲ್ಲ ಅನ್ನೋ ಹಾಗಿಲ್ಲ, ಇತ್ತೀಚಿಗೆ ಬಾಯ್ಸ್ ವೆರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್ ಮಹಾಸಂಗಮ ವೇದಿಕೆಯಲ್ಲಿ ನಟನೆ ಮಾಡಿ ಎಲ್ಲರಿಂದ ಸೈ ಅನ್ನಿಸಿಕೊಂಡಿದ್ದ. ಹನುಮಂತ ಹೀರೋ ಆಗಬೇಕು ಅನ್ನೋದು ಅವನ ಅಭಿಮಾನಿಗಳ ಬೇಡಿಕೆ. ಆದ್ರೆ ಹನುಮಂತ ಮಾತ್ರ ಅದೆಲ್ಲಾ ಬ್ಯಾಡ್ರಿಪಾ.. ನನ್ನ ಪಾಡಿಗೆ ಹಾಡಿಕೊಂಡು ಇರ್ತೀನಿ. ಈಗಲೇ ಕೈ ತುಂಬಾ ಕೆಲಸ ಇದೆ. ಅಷ್ಟು ಸಾಕು ಅಂತಿದ್ದಾನೆ. 

05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
Read more