ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!

ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!

Published : Dec 03, 2025, 12:42 PM IST

ಕೊನೆಗೂ ಗಿಲ್ಲಿ ಮಾತಿನಂತೆಯೇ ಜಾಹ್ನವಿ ಮನೆಯಿಂದ ಹೊರಬಂದಿದ್ದಾರೆ. ಆದ್ರೆ ಹೊರಗೆ ಜನರು ಗಿಲ್ಲಿಯನ್ನ ಇಷ್ಟ ಪಡೋದು ನೋಡಿ ಅವರಿಗೆ ಬೇಸರ ಆಗಿದೆ. ಜನ ಮರಳೋ.. ಜಾತ್ರೆ ಮರಳೋ ಅನ್ನೊ ಜಾಹ್ನವಿ , ಗಿಲ್ಲಿ ಬರೀ ಸಿಲ್ಲಿ ಅಂತಿದ್ದಾರೆ. ಸತ್ಯ ಕಥೆ ತಿಳಿಯಲು ಈ ವಿಡಿಯೋ ನೋಡಿ..

ಜನ ಮರುಳೋ.. ಜಾತ್ರೆ ಮರುಳೋ.. ಎಂದ ಸ್ಪರ್ಧಿ
‘ಜಾನು ನೀನು ಗಾನು..’ ಎಂದಿದ್ದ ಗಿಲ್ಲಿ ನಟ
ಕಳೆದ ವಾರ ದೊಡ್ಮನೆಯಿಂದ ಜಾಹ್ನವಿ ಔಟ್
ಜಾಹ್ನವಿ ಜೊತೆ ಬಿಗ್​ ಬಾಸ್ ಮನೆಯ ಕಥೆ..!

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರೋ ಸ್ಪರ್ಧಿ ಜಾಹ್ನವಿ. ದೊಡ್ಮನೆಯಲ್ಲಿ ಜಾಹ್ನವಿಗೂ ಗಿಲ್ಲಿಗೂ ಬಹಳಾನೇ ವಾದ ವಾಗ್ವಾದ ನಡೆದಿದ್ವು. ಗಿಲ್ಲಿ ಬಗ್ಗೆ ದೊಡ್ಮನೆಯಿಂದ ಹೊರ ಬಂದಿರೋ ಜಾಹ್ನವಿ ಹೇಳಿದ್ದೇನು..? ನೋಡೋಣ ಬನ್ನಿ.

ಗಿಲ್ಲಿ ಅಂದ್ರೆ ಸಿಲ್ಲಿ.. ಜಾಹ್ನವಿ ಹೇಳಿದ ಇನ್​ಸೈಡ್ ಸ್ಟೋರಿ; ಜನ ಮರುಳೋ.. ಜಾತ್ರೆ ಮರುಳೋ.. ಎಂದ ಬಿಗ್ ಸ್ಪರ್ಧಿ
ಯೆಸ್ ಕಳೆದ ವಾರ ಬಿಗ್​ ಬಾಸ್ ಮನೆಯಿಂದ ಜಾಹ್ನವಿ ಹೊರಬಿದ್ದಿದ್ರು. ಸ್ಟ್ರಾಂಗ್ ಸ್ಪರ್ಧಿಯಾದ್ರೂ ಜಾಹ್ನವಿ ದೊಡ್ಮನೆಯಿಂದ ಆಚೆ ಬಂದಿದ್ದು ವೀಕ್ಷಕರಿಗೆ ಆಶ್ಚರ್ಯ ತಂದಿತ್ತು. ಅದ್ರಲ್ಲೂ ಜಾಹ್ನವಿ , ಅಶ್ವಿನಿ ಸ್ನೇಹ ಬೆಳೆಸಿ ಗಿಲ್ಲಿ ಜೊತೆಗೆ  ಜಿದ್ದಿಗೆ ಬಿದ್ದಿದ್ರು.

ಗಿಲ್ಲಿ ಜಾಹ್ನವಿ ನಡುವೆ ಹಲವು ಬಾರಿ ವಾದ ವಿವಾದ ನಡೆದಿದ್ವು. ನೀನು ಸ್ವಯಂಘೋಷಿತ ಬಿಗ್ ಬಾಸ್ ಸೀಸನ್-12 ವಿಜೇತ ಅಂತ ಗಿಲ್ಲಿಗೆ ಜಾನು ರೇಗಿಸಿದ್ರೆ, ಜಾನು ನೀನು ಗಾನು ಅಂತ ಗಿಲ್ಲಿ ಕಿಚಾಯಿಸಿದ್ದ.

ಕೊನೆಗೂ ಗಿಲ್ಲಿ ಮಾತಿನಂತೆಯೇ ಜಾಹ್ನವಿ ಮನೆಯಿಂದ ಹೊರಬಂದಿದ್ದಾರೆ. ಆದ್ರೆ ಹೊರಗೆ ಜನರು  ಗಿಲ್ಲಿಯನ್ನ ಇಷ್ಟ ಪಡೋದು ನೋಡಿ ಅವರಿಗೆ ಬೇಸರ ಆಗಿದೆ. ಜನ ಮರಳೋ.. ಜಾತ್ರೆ ಮರಳೋ ಅನ್ನೊ ಜಾಹ್ನವಿ , ಗಿಲ್ಲಿ ಬರೀ ಸಿಲ್ಲಿ ಅಂತಿದ್ದಾರೆ.

ಎಲ್ಲರನ್ನೂ ಕೆಳಗೆ ಹಾಕಿ ಗಿಲ್ಲಿ ತಾನು ಹೀರೋ ಆಗ್ತಿದ್ದಾನೆ ಅಂತಾರೆ ಜಾಹ್ನವಿ . ಒಳಗೆ ನಡೆಯೋ ಪೂರ್ತಿ ವಿಷ್ಯ ಜನಕ್ಕೆ ಗೊತ್ತಾಗಲ್ಲ. ಎಪಿಸೋಡ್​​ನಲ್ಲಿ ಕಾಣೋದಷ್ಟೇ ನಿಜ ಅಲ್ಲ ಅಂತಾರೆ ಜಾಹ್ನವಿ.

ಗಿಲ್ಲಿ ತನ್ನ ಬಗ್ಗೆನೂ ಕೆಟ್ಟದಾಗಿ ಬಿಂಬಿಸಿ ತಾನು ಬಿಗ್​ಬಾಸ್ ನಿಂದಾನೆ ಹೊರಬರುವಂತೆ ಮಾಡಿದ ಅನ್ನೋ ಸಿಟ್ಟು ಜಾಹ್ನವಿಗೆ ಇದ್ದಂತಿದೆ. ಎನಿ ವೇ ಜಾನು ಮತ್ತು ಗಿಲ್ಲಿ ಗಲಾಟೆ ಬಿಗ್​ಬಾಸ್ ನೋಡುಗರಿಗಂತೂ ಸಖತ್ ಮಜಾ  ಕೊಡ್ತಾ ಇತ್ತು. ಇನ್ಮುಂದೆ ಬಿಗ್​ಬಾಸ್ ವೀಕ್ಷಕರು ಅದನ್ನ ಪಕ್ಕಾ ಮಿಸ್ ಮಾಡಿಕೊಳ್ತಾರೆ ಅನ್ನೋದಂತೂ ಸತ್ಯ...!
ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ..

05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more