ಕೊಲ್ಲೂರಿನಲ್ಲಿ 'ಸಲಾಂ ಮಂಗಳಾರತಿ' ಹೆಸರು ತೆಗೆಯಲು ವಿಹಿಂಪ ಆಗ್ರಹ

Mar 26, 2022, 5:27 PM IST

ದಕ್ಷಿಣ ಭಾರತದ ಪ್ರಸಿದ್ದ ಶಕ್ತಿ ಪೀಠ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ನೆನಪಿನಲ್ಲಿ ನಡೆಯುವ ಸಲಾಂ ಮಂಗಳಾರತಿಯ ಹೆಸರನ್ನು ಬದಲಿಸಿ, ಸಲಾಂ ಶಬ್ದವನ್ನು ಕೈಬಿಟ್ಟು ಕೇವಲ ದೇವರ ಹೆಸರಲ್ಲಿ ಆರತಿ ನಡೆಸಬೇಕೆಂಬ ಕೂಗು ಕೇಳಿಬಂದಿದೆ.

ಎಲ್ಲಾ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ, ಬಿಜೆಪಿಯವರಿಗೆ ಉತ್ತರ ಕೊಡಲ್ಲ: ಸಿದ್ದರಾಮಯ್ಯ

ಕೊಲ್ಲೂರು ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ನೇತೃತ್ವದಲ್ಲಿ  ಈ ಕುರಿತು ಶನಿವಾರ ಮನವಿ ಸಲ್ಲಿಸಲಾಗಿದೆ.ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸಂಧ್ಯಾ ರಮೇಶ್ ಹಾಗೂ ದೇವಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಮನವಿಯನ್ನು ಸ್ವೀಕರಿಸಿದ್ದಾರೆ. 

ಕ್ರೂರಿ, ಮತಾಂಧ, ಕನ್ನಡ ಮತ್ತು ಹಿಂದೂ ವಿರೋಧಿ ಟಿಪ್ಪು ಸಾವಿರಾರು ಹಿಂದೂಗಳ ನರಮೇಧ ನಡೆಸಿದ್ದಾನೆ. ನೂರಾರು ದೇವಸ್ಥಾನಗಳು ಟಿಪ್ಪುವಿನಿಂದ ದ್ವಂಸಗೊಂಡಿದೆ, ದೇವಿ ಮೂಕಾಂಬಿಕೆಗೆ ಸಲಾಂ ಹೆಸರಿನಲ್ಲಿ ಮಂಗಳಾರತಿಯಾಗುತ್ತಿರುವುದು ಖೇದಕರ. ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಲ್ಲಿ ಮಂಗಳಾರತಿ ನಡೆಯುವುದು ಗುಲಾಮಗಿರಿಯ ಸಂಕೇತ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು, ಸಲಾಂ ಹೆಸರನ್ನು ತೆಗೆದು ದೇವರ ಹೆಸರಲ್ಲಿ ಮಂಗಳಾರತಿ ಮಾಡಿ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.