vuukle one pixel image

ಇದು ಬಜೆಟ್‌ ಅಲ್ಲ, ಬಿಹಾರ ಚುನಾವಣಾ ಪ್ರಣಾಳಿಕೆ ಎಂದ ಎಚ್‌ಕೆ ಪಾಟೀಲ್‌

Santosh Naik  | Published: Feb 1, 2025, 6:38 PM IST

ಬೆಂಗಳೂರು (ಫೆ.1): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ ಬಗ್ಗೆ ರಾಜ್ಯ ಸರ್ಕಾರದ ಸಚಿವರುಗಳು ಟೀಕಾಪ್ರಹಾರ ಮುಂದುವರಿಸಿದ್ದಾರೆ. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್‌ ಇದು ಬಜೆಟ್‌ ಅಲ್ಲವೇ ಅಲ್ಲ ಎಂದಿದ್ದಾರೆ.

ಇದು ಕೇಂದ್ರ ಬಜೆಟ್‌ ಅಲ್ಲ. ಇದು ಬಿಹಾರ ಚುನಾವಣಾ ಪ್ರಣಾಳಿಕೆ. ಬಡತನ ನಿವಾರಣೆ ಬಗ್ಗೆ ಯಾವುದೇ ಗಂಭೀರ ಕ್ರಮಗಳಿಲ್ಲ. ವಸತಿ ಸಮಸ್ಯೆ, ಕೃಷಿಕರ ಸಮಸ್ಯೆಗಳು, ಮೈಕ್ರೋಫೈನಾನ್ಸ್‌ ಹಾವಳಿ ಬಗ್ಗೆ ಯಾವುದೇ ಅಂಶಗಳಿಲ್ಲ ಎಂದು ಹೇಳಿದ್ದಾರೆ.

Budget 2025: ನಿವೃತ್ತರು ಹಾಗೂ ಪಿಂಚಣಿ ಪಡೆಯೋರಿಗೆ ಬಜೆಟ್‌ನ ಲಾಭಗಳೇನು?

ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಬಜೆಟ್‌ ಆಗಿದೆ. ಮನಸೋ ಇಚ್ಛೆ ಮಾಡುವ ಬಜೆಟ್‌ ರಾಜ್ಯಕ್ಕೆ ದೇಶಕ್ಕೆ ಮಾರಕ ಎಂದು ಸಚಿವರು ಹೇಳಿದ್ದಾರೆ.