Published : Mar 07, 2025, 06:50 PM ISTUpdated : Mar 07, 2025, 06:54 PM IST
ಆಲ್ಕೋಹಾಲ್ ಪ್ರಿಯರಿಗೆ ಇಷ್ಟವಾಗುವ ಪಾನೀಯಗಳಲ್ಲಿ ಬಿಯರ್ ಮುಖ್ಯವಾದದ್ದು. ವಿಸ್ಕಿ ಅಭ್ಯಾಸ ಇಲ್ಲದವರು ಕೂಡ ಬಿಯರ್ ಸೇವಿಸುತ್ತಾರೆ. ಆದರೆ ಬಿಯರ್ ಕುಡಿದರೆ ಹೊಟ್ಟೆ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಇದರಲ್ಲಿ ಎಷ್ಟು ಸತ್ಯಾಂಶವಿದೆ? ನಿಜವಾಗಿಯೂ ಬಿಯರ್ ಕುಡಿದರೆ ಹೊಟ್ಟೆ ಬರುತ್ತಾ? ಪೂರ್ತಿ ವಿವರಗಳನ್ನು ಈಗ ತಿಳಿಯೋಣ..
ಬಿಯರ್ ಹಲವರ ನೆಚ್ಚಿನ ಡ್ರಿಂಕ್. ಬೇಸಿಗೆ ಕಾಲದಲ್ಲಂತೂ ಬಹುತೇಕರು ಬಿಯರ್‌ಗೆ ಬದಲಾಗುತ್ತಾರೆ. ತಣ್ಣನೆ ಬಿಯರ್ ಗುಟುಕು ಇಳಿಸಿ ಒಂದಷ್ಟು ಹರಟೆ ಹೊಡೆಯಲು ಹಲವರು ಬಯಸುತ್ತಾರೆ. ಕೆಲವರಿಗೆ ಬಿಯರ್ ಇಷ್ಟವಿದ್ದರೂ ಕುಡಿದರೆ ಹೊಟ್ಟೆ ಬರುತ್ತೆ ಅನ್ನೋ ಕಾರಣಕ್ಕೆ ದೂರವಿರುತ್ತಾರೆ. ನಿಜಕ್ಕೂ ಬಿಯರ್ ಕುಡಿಯುವುದರಿಂದ ಹೊಟ್ಟೆಯ ಫ್ಯಾಟ್ ಹೆಚ್ಚಾಗುತ್ತಾ?
24
ಬಿಯರ್ ಕುಡಿದ ತಕ್ಷಣ ಅದು ಅನ್ನನಾಳದ ಮೂಲಕ ನೇರವಾಗಿ ಹೊಟ್ಟೆಗೆ ಹೋಗುತ್ತದೆ. ಆಮೇಲೆ ಬಿಯರ್‌ನಲ್ಲಿರುವ ಆಲ್ಕೋಹಾಲ್ ನೇರವಾಗಿ ರಕ್ತಕ್ಕೆ ಸೇರುತ್ತದೆ. ಬಿಯರ್‌ನಲ್ಲಿರುವ ಮತ್ತೊಂದು ವಸ್ತುವಾದ ಎಸಿಟೈಲ್ CoA ಯಿಂದ ಕೊಬ್ಬು ಉತ್ಪಾದನೆಯಾಗಲು ಪ್ರಾರಂಭವಾಗುತ್ತದೆ. ಪ್ರತಿದಿನ ಬಿಯರ್ ಕುಡಿಯುವವರಲ್ಲಿ ಈ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ.
34
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ದೇಹವು ಮೊದಲು ಆಲ್ಕೋಹಾಲ್ ಅನ್ನು ಕರಗಿಸಲು ಪ್ರಾಮುಖ್ಯತೆ ನೀಡುತ್ತದೆ. ಪರಿಣಾಮವಾಗಿ, ಉಳಿದ ಆಹಾರ ಪದಾರ್ಥಗಳು ಸಂಪೂರ್ಣವಾಗಿ ಜೀರ್ಣವಾಗದೆ ಕೊಬ್ಬಾಗಿ ಬದಲಾಗುತ್ತವೆ. ಹೀಗಾಗಿ ಹೊಟ್ಟೆ ಬರಲಿದೆ. ಹೀಗಾಗಿ ಬಿಯರ್ ಕುಡಿದರೆ ಹೊಟ್ಟೆ ಬರುತ್ತಾ ಅನ್ನೋದು ಪ್ರಶ್ನೆಗೆ ಸರಳ ಉತ್ತರ ಹೌದು ಎನ್ನುತ್ತಾರೆ ವೈದ್ಯರು.
44
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಹೊಟ್ಟೆ ಬರದಂತೆ ಇರಲು ಏನು ಮಾಡಬೇಕು? ತೂಕ, ಹೊಟ್ಟೆ ಹೆಚ್ಚಾಗಿರುವವರು ಬಿಯರ್‌ಗೆ ದೂರವಿರುವುದು ಒಳ್ಳೆಯದು. ಲೈಟ್ ಫುಡ್ ತೆಗೆದುಕೊಳ್ಳಬೇಕು. ಹಾಗಂತ ತೆಳ್ಳಗಿದ್ದರವು ಬಿಯರ್ ಕುಡಿದರೆ ಫ್ಯಾಟ್ ಉತ್ಪಾದನೆಯಾಗುವುದಿಲ್ಲ ಎಂದಲ್ಲ. ಬಿಯರ್ ಫ್ಯಾಟ್ ಹೆಚ್ಚಿಸುವುದಂತು ನಿಜ.