Apr 21, 2021, 2:44 PM IST
ಬೆಂಗಳೂರು (ಏ. 21): ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್‌ಗೆ ಸಿಗುತ್ತಿಲ್ಲ. ಬೀದರ್‌ನಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಿಂದ ಸೋಂಕಿತರು ಫುಟ್ ಪಾತ್‌ನಲ್ಲಿ ಮಲಗಿ ನರಳುತ್ತಿದ್ದಾರೆ.
ಕೊರೊನಾಗೆ ಹೋಂ ಐಸೋಲೇಷನ್ ಅಸ್ತ್ರ ಎಷ್ಟು ಪರಿಣಾಮಕಾರಿ..?
ಈ ಬಗ್ಗೆ ಬೀದರ್ ಉಸ್ತುವಾರಿ ಸಚಿವ ಪ್ರಭು ಚೌಹಾಣ್, ಪ್ರತಿಕ್ರಿಯಿಸಿದ್ದು, 'ನಾನು ಡಿಸಿ ಜೊತೆ, ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದೇನೆ. ಚೌಲ್ಟ್ರಿ, ಸಭಾಮಂದಿರಗಳಲ್ಲಿ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಸಿದ್ಧತೆ ನಡೆಸುತ್ತಿದ್ದೇವೆ. ಖಂಡಿತ ವ್ಯವಸ್ಥೆ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.