ಜೂ. 8 ರಿಂದ ದೇಗುಲಗಳ ದರ್ಶನ; ಕೊಲ್ಲೂರು, ಧರ್ಮಸ್ಥಳದಲ್ಲಿ ಹೀಗಿದೆ ವ್ಯವಸ್ಥೆ

Jun 6, 2020, 2:10 PM IST

ಬೆಂಗಳೂರು (ಜೂ. 06): ಕಳೆದ ಎರಡೂವರೆ ತಿಂಗಳ ನಂತರ ಲಾಕ್‌ಡೌನ್‌ಗೆ ತೆರವು ನೀಡಲಾಗಿದ್ದು ಜೂನ್‌ 08 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಪೂಜೆಗೆ ಅವಕಾಶ ಇರುವುದಿಲ್ಲ, ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಧಾರ್ಮಿಕ ಕೇಂದ್ರಗಳ ರೀ ಓಪನ್ ಡೇಂಜರ್.. ಡೇಂಜರ್..! ಟಾಸ್ಕ್‌ ಫೋರ್ಸ್ ತಜ್ಞರ ಕಳವಳ

ಇನ್ನು ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕ್ಷೇತ್ರದ ಪ್ರಮುಖ ಸೇವೆ ಚಂಡಿಕಾ ಹೋಮ ನಡೆಸುವ ಬಗ್ಗೆ ಇನ್ನೂ ನಿರ್ದಾರ ತೆಗೆದುಕೊಂಡಿಲ್ಲ. ಇನ್ನು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮತ್ತು ಸೇವೆಗೆ ಅವಕಾಶ ಇರುತ್ತದೆ. ಸಂಪ್ರದಾಯದಂತೆ ವಾಕ್‌ದೋಷ ನಿವಾರಣೆ ಹಾಗೂ ಮುಡಿ ಕೊಡುವ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳಿಗೆ ಔತ್ರದ ವ್ಯವಸ್ಥೆ, ನೇತ್ರಾವತಿ ಪುಣ್ಯಸ್ನಾನಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದ ಇತರ ದೇವಸ್ಥಾನಗಳ ವ್ಯವಸ್ಥೆ ಹೇಗಿದೆ ಇಲ್ಲಿದೆ ನೋಡಿ..!