RL Jalappa : ಟ್ರಸ್ಟ್ ವಾರಸುದಾರಿಕೆಗಾಗಿ ಫ್ಯಾಮಿಲಿ ಫೈಟ್, ಕಾಲೇಜು ಮುಂದೆ ಹೈಡ್ರಾಮಾ

Jan 24, 2022, 3:59 PM IST

ಬೆಂಗಳೂರು (ಜ. 24): ಆರ್ ಎಲ್ ಜಾಲಪ್ಪ (RL Jalappa) ನಿಧನದ ಬಳಿಕ ಟ್ರಸ್ಟ್ (Jalappa Trust) ಅಧಿಕಾರಕ್ಕಾಗಿ ಕಲಹ ಶುರುವಾಗಿದೆ. ಟ್ರಸ್ಟ್ ಅಧ್ಯಕ್ಷರಾಗಿ ಆಯ್ಕೆಯಾದ ಸಂಬಂಧಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜಾಲಪ್ಪ ಹಿರಿಯ ಪುತ್ರ ನರಸಿಂಹ ಸ್ವಾಮಿಗೆ ಅಧಿಕಾರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ದೇವರಾಜ ಅರಸು ಮೆಡಿಕಲ್ ಕಾಲೇಜು ಬಳಿ ಭಾರೀ ಪ್ರತಿಭಟನೆ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಆದರೂ ಜಾಲಪ್ಪ ಸಂಬಂಧಿ ನಾಗರಾಜ್ ಹಾಗೂ ಮಕ್ಕಳ ನಡುವೆ ಜಟಾಪಟಿ ಮುಂದುವರೆದಿದೆ. 

1980-90ರ ದಶಕದಲ್ಲಿ ರಾಜ್ಯ ರಾಜಕಾರಣದ ಅತ್ಯಂತ ಪ್ರಭಾವಿ ಹಾಗೂ ಚಾಣಾಕ್ಷ ರಾಜಕೀಯಪಟು ಎಂದೇ ಖ್ಯಾತರಾಗಿದ್ದ ಆರ್‌.ಎಲ್‌.ಜಾಲಪ್ಪ (ರಾಜಾನುಕುಂಟೆ ಲಕ್ಷ್ಮೇನಾರಾಯಣಪ್ಪ ಜಾಲಪ್ಪ) 4 ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದವರು. ದೊಡ್ಡಬಳ್ಳಾಪುರದಂತಹ ನೇಕಾರಿಕೆ, ಕೃಷಿ ಕೇಂದ್ರಿತ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ, 4 ಬಾರಿ ಸಂಸದರಾಗಿ ಆಯ್ಕೆಯಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸುವ ಮೂಲಕ ಚಾಣಾಕ್ಷ ಆಡಳಿತಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದರು.