ವಿದೇಶದಿಂದ ಬಂದ ಮಹಿಳೆಯ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ

Jul 22, 2020, 3:42 PM IST

ಬೆಂಗಳೂರು (ಜು. 22): ವಿದೇಶದಿಂದ ಬಂದ ಮಹಿಳೆಯ ಕ್ವಾರಂಟೈನ್‌ಗೆ ನೆಲಮಂಗಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲೇ ವಿದೇಶದಿಂದ ಬಂದವರನ್ನು ತಡೆದಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ವಿಚಾರಣೆ ನಡೆಸಿದ್ದಾರೆ. 

ಈಗ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಬೇರೆ ಊರುಗಳಿಂದ ಬಂದವರನ್ನೇ ಊರಿನೊಳಗೆ ಬಿಟ್ಟುಕೊಳ್ಳಲು ಜನರು ಹೆದರುತ್ತಿದ್ದಾರೆ. ವಿದೇಶದಿಂದ ಬಂದವರು ಅಂದರೆ ಸಹಜವಾಗಿಯೇ ಭಯ ಇರುತ್ತದೆ. ಹಾಗಾಗಿ ವಿದೇಶದಿಂದ ಬಂದ ಮಹಿಳೆಯ ಕ್ವಾರಂಟೈನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಕೋವಿಡ್‌ಯೇತರ ರೋಗಿಗೆ ಚಿಕಿತ್ಸೆ ನೀಡಲು ನಕಾರ; ರೊಚ್ಚಿಗೆದ್ದ ಜನರು ಮಾಡಿದ್ದೇನು ನೋಡಿ..!