ಅನಿವಾಸಿ ಕನ್ನಡಿಗರಿಗೆ ನೆರವಾದ ರಾಜ್ಯಸಭಾ ಸಂಸದ ಜಿ.ಸಿ. ಚಂದ್ರಶೇಖರ್

Jun 27, 2020, 11:47 AM IST

ಬೆಂಗಳೂರು(ಜೂ.27): ಲಾಕ್‌ಡೌನ್‌ನಿಂದಾಗಿ ಮಸ್ಕಟ್‌ನಲ್ಲಿ ಸಿಲುಕಿದ್ದ ಮಂಗಳೂರಿನ ಅನಿವಾಸಿ ಕನ್ನಡಿಗರ ನೆರವಿಗೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ನೆರವಿನ ಹಸ್ತ ಚಾಚಿದ್ದು, ತವರಿಗೆ ಮರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ.

ಮಸ್ಕಟ್‌ನಲ್ಲಿ 220 ಕನ್ನಡಿಗರು ಸಿಲುಕಿಕೊಂಡಿದ್ದರು. ಮಸ್ಕಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಸಂಸದ ಚಂದ್ರಶೇಖರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಕ್ಷಣ ಕಾರ್ಯಪ್ರೌವೃತ್ತರಾದ ಚಂದ್ರಶೇಖರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ದೂತವಾಸ ಕಚೇರಿಯ ಜತೆ ಮಾತನಾಡಿ ರಾಜ್ಯಕ್ಕೆ ಮರಳಲು ವ್ಯವಸ್ಥೆ ಮಾಡಿದ್ದಾರೆ. 

2031ರ ಮಾಸ್ಟರ್ ಪ್ಲಾನ್‌ಗೆ ರಾಜ್ಯ ಸರ್ಕಾರದಿಂದ ತಡೆ!

ಈ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಿದ ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿಗೆ ಸಂಸದ ಚಂದ್ರಶೇಖರ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಭಾನುವಾರ(ಜೂ.28) 220 ಕನ್ನಡಿಗರು ಮಂಗಳೂರಿಗೆ ಬಂದಿಳಿಯಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.