ಬೆಂಗಳೂರು ಮಾತ್ರವಲ್ಲ ಬೇರೆ ಜಿಲ್ಲೆಗಳಿಗೂ ಲಾಕ್‌ಡೌನ್ ವಿಸ್ತರಣೆ?

Jul 12, 2020, 12:19 PM IST

ಬೆಂಗಳೂರು (ಜು. 12):  ಹತೋಟಿ ತಪ್ಪುತ್ತಿರುವ ಕೊರೊನಾಗೆ ಬ್ರೇಕ್ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದ ಒಂದು ವಾರದವರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿ ಲಾಕ್‌ಡೌನ್ ಘೋಷಿಸಿದೆ.

ಕೊರೋನಾ ಕುರಿತ ಮಹತ್ವದ ಸಭೆಗೆ 20 BBMP ಕಾರ್ಪೊರೇಟರ್‌ಗಳು ಗೈರು..!

ಇದರ ಜೊತೆ ಬೇರೆ ಜಿಲ್ಲೆಗಳಿಗೂ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್‌ ಆರ್ ವಿಶ್ವನಾಥ್ ಹೇಳಿದ್ದಾರೆ. ಈ ಬಗ್ಗೆ ನಾಳೆ ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಲಾಕ್‌ಡೌನ್‌ ವಿಚಾರವನ್ನು ಡಿಸಿ ವಿವೇಚನೆಗೆ ಬಿಡಲಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ.