ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಮಾಡಿದ 5 ಎಡವಟ್ಟುಗಳಿವು

Oct 23, 2020, 3:10 PM IST

ಬೆಂಗಳೂರು (ಅ. 23): ರಾಜ್ಯದಲ್ಲಿ ಕೊರೊನಾ ನಿಯಂತ್ರಣವನ್ನು ಯಾವ ರೀತಿ ಮಾಡಲಾಗುತ್ತಿದೆ? ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿದೆ. ಬೆಂಗಳೂರು, ಬಳ್ಳಾರಿ ಹಾಗೂ ಕಲ್ಬುರ್ಗಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೋವಿಡ್ 19 , ಸದ್ಯಕ್ಕೆ ನಿರಾಳ; ಡಿಸಂಬರ್‌ನಲ್ಲಿ ಶುರುವಾಗಲಿದೆಯಾ 2 ನೇ ಅಲೆ?

ಆಗ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಸರ್ಕಾರ ಮಾಡುತ್ತಿರುವ ಎಡವಟ್ಟುಗಳನ್ನು ಪಟ್ಟಿ ಮಾಡಿದೆ.  ಸೋಂಕಿತರ ಡಿಸ್ಚಾರ್ಜ್ ಬಳಿಕ ಮಾನಿಟರ್ ಮಾಡುತ್ತಿಲ್ಲ. 20  ಸೋಂಕಿತರು ಇದ್ರೆ ಮಾತ್ರ ಅದನ್ನ ಕಂಟೈನ್ಮೆಂಟ್ ಝೋನ್ ಮಾಡಲಾಗುತ್ತಿದೆ. ಇನ್ನ ಬಿಬಿಎಂಪಿ ಪ್ರೈಮರಿ ಕಾಂಟ್ಯಾಕ್ಟನ್ನು ಪತ್ತೆ ಹಚ್ಚುತ್ತಿಲ್ಲ. ಕೊರೊನಾ ವಿಚಾರದಲ್ಲಿ ಸರ್ಕಾರ ಬಹಳ ನಿರ್ಲಕ್ಷ್ಯ ವಹಿಸುತ್ತಿದೆ.