ನನ್ನ ಅವಧಿಯಲ್ಲಿ ಸಿಎಂ ಪತ್ನಿಗೆ ಬದಲಿ ಭೂಮಿ ಕೊಡಲು ಸಿದ್ದರಾಮಯ್ಯ ಒಪ್ಪಲಿಲ್ಲ: ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್

By Kannadaprabha News  |  First Published Nov 20, 2024, 5:29 AM IST

ನನ್ನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ಭೂಮಿಯನ್ನು ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ತಿಳಿಸಿದರು.


ಮೈಸೂರು (ನ.20): ನನ್ನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ಭೂಮಿಯನ್ನು ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ತಿಳಿಸಿದರು.

ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಮಂಗಳವಾರ ಕಚೇರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಬದಲಿ ಜಾಗವನ್ನು ಕೊಡಲು ತೀರ್ಮಾನ ಮಾಡಿದ್ದೋ ಎಂದು ಹೇಳಿದರು.

Tap to resize

Latest Videos

undefined

ಈ ವಿಚಾರವನ್ನು ನಾನೇ ಖುದ್ದಾಗಿ ಸಿದ್ದರಾಮಯ್ಯ ಭೇಟಿ ಮಾಡಿ ವಿಷಯ ತಿಳಿಸಿದೆ. ಆದರೆ, ಸಿಎಂ ಯಾವುದೇ ಕಾರಣಕ್ಕೂ ಬೇಡ ಅಂದ್ರು. ನಾನು ಸಿಎಂ ಆಗಿರುವ ಸಮಯದಲ್ಲಿ ಈ ನಿರ್ಣಯಗಳು ಬೇಡ ಅಂದ್ರು. ಸಿಎಂ ಪತ್ನಿ ಪಾರ್ವತಿ ಕಳೆದ ಭೂಮಿಗೆ ಸಮಾನಂತರ ಬಡಾವಣೆಯಲ್ಲಿ ಭೂಮಿ ಕೊಡಲು ಸಭೆ ತಮ್ಮ ತೀರ್ಮಾನ ಮಾಡಿತ್ತು. ನನ್ನ ಅವಧಿ ಮುಗಿದ ಬಳಿಕ ಮುಂದೆ ಏನಾಗಿದೆ ಗೊತ್ತಿಲ್ಲ ಎಂದರು.

ನಾನು ಮುಡಾ ಆಯುಕ್ತರಿಗೆ ಯಾವುದೇ ಪತ್ರ ಬರೆದಿಲ್ಲ. ನಮ್ಮ ಕಾಲದಲ್ಲಿ ಅಲ್ಲ ಹಿಂದಿನ ಕಾಲದಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಆದರೆ, ನನ್ನ ಅವಧಿಯಲ್ಲಿ 50:50 ಅನುಪಾತದಡಿಯಲ್ಲಿ 10 ಅಡಿ ಜಾಗವನ್ನು ಕೊಟ್ಟಿಲ್ಲ. ರೈತರನ್ನ ಕೇಳಿದಾಗ 50:50 ಅನುಪಾತಕ್ಕೆ ಯಾರೂ ಒಪ್ಪಲಿಲ್ಲ. ಯಾರು ಸಹ ಭೂಮಿಯನ್ನ ಕೊಡಲು ಒಪ್ಪಲಿಲ್ಲ. ಹೀಗಾಗಿ ಹೊಸ ಬಡವಾಣೆ ನಿರ್ಮಾಣ ಮಾಡಿಲ್ಲ ಎಂದು ಅವರು ತಿಳಿಸಿದರು.

ನಬಾರ್ಡ್‌ನಿಂದ ಕೃಷಿ ಕಡಿತ; ರೈತರ ಪರ ಎನ್ನುವ ಕುಮಾರಸ್ವಾಮಿ ಈಗ್ಯಾಕೆ ಬಾಯಿಬಿಡುತ್ತಿಲ್: ಚಲುವರಾಯಸ್ವಾಮಿ ಕಿಡಿ

ಸಿದ್ದರಾಮಯ್ಯ ಪತ್ನಿ ಯಾವ ಪತ್ರವನ್ನ ಬರೆದಿಲ್ಲ, ಫೋನ್ ಕೂಡ ನನಗೆ ಮಾಡಿಲ್ಲ. ಮಲ್ಲಿಕಾರ್ಜುನಸ್ವಾಮಿ ಸಹ ಬಂದು ನನ್ನ ಬಳಿ ಮನವಿ ಮಾಡಿಲ್ಲ. ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದ್ರೆ ಹೋಗಿ ತನಿಖೆ ಎದುರಿಸುತ್ತೇನೆ ಎಂದು ಅವರು ಹೇಳಿದರು.
ವಿಚಾರಣೆಗೆ ಬದಲಿ ದಿನ:

ಲೋಕಾಯುಕ್ತ ಅಧಿಕಾರಿಗಳನ್ನು ಭೇಟಿ ಮಾಡಿದ ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ಅವರು, ಮುಡಾ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗಲು ನೀಡಿದ್ದ ದಿನದಲ್ಲಿ ಕೌಟುಂಬಿಕ ಕಾರ್ಯಕ್ರಮ ಇದ್ದು, ಬೇರೆ ದಿನ ವಿಚಾರಣೆಗೆ ಸಮಯ ನೀಡಬೇಕು ಎಂದು ಮನವಿ ಮಾಡಿ ತೆರಳಿದರು.

ದೇವರಾಜುಗೆ ಬದಲಿ ದಿನಾಂಕ:
ಮುಡಾ ಹಗರಣ ಸಂಬಂಧ ಎ4 ಆರೋಪಿ ದೇವರಾಜು ಅವರಿಗೆ ನ.20 ರಂದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ, ನ.20 ರಂದು ಪಾಲಯ್ಯ ಮತ್ತು ಮುಡಾ ಎಂಜಿನಿಯರ್ ಒಬ್ಬರು ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ದೇವರಾಜು ಅವರಿಗೆ ಬದಲಿ ದಿನಾಂಕವನ್ನು ಲೋಕಾಯುಕ್ತ ಪೊಲೀಸರು ನಿಗದಿಪಡಿಸಿದ್ದಾರೆ.ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ

ಮುಡಾ ಹಗರಣ ಸಂಬಂಧ ಹಿಂದಿನ ಆಯುಕ್ತ ಡಾ.ಡಿ.ಬಿ. ನಟೇಶ್ ಹಲವಾರು ಅಕ್ರಮಗಳನ್ನು ಎಸಗಿದ್ದು, ಲೋಕಾಯುಕ್ತ ಪೊಲೀಸರು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರ ಗಂಗರಾಜು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದರು.

ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಗೆ ಮಂಗಳವಾರ ಬೆಳಿಗ್ಗೆ ಡಾ. ನಟೇಶ್ ಅವರು ವಿಚಾರಣೆಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿದ್ದ ಗಂಗರಾಜು, ನಟೇಶ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.ನಟೇಶ್ ರೂವಾರಿ- ಆರೋಪ

ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತರುತ್ತಿರುವುದೇ ಲಕ್ಷಣ: ಸ್ನೇಹಮಯಿ ಕೃಷ್ಣ

ಮುಡಾದ ಮಾಜಿ ಆಯುಕ್ತ ನಟೇಶ್ ಅವರೇ ಮುಡಾದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ರೂವಾರಿ. 50:50 ಅನುಪಾತ ಸೇರಿದಂತೆ ಮುಡಾದಲ್ಲಿ ನಡೆದಿರುವ ಬಹುತೇಕ ಹಗರಣಗಳಿಗೆ ಮುಡಾದ ಆಯುಕ್ತರಾಗಿದ್ದ ನಟೇಶ್ ಪ್ರಮುಖ ಕಾರಣ ಎಂದು ಮುಡಾದ ನಿವೃತ್ತ ಅಧಿಕಾರಿ ‌ನಟರಾಜು ಆರೋಪಿಸಿದರು.

ವಿಚಾರಣೆಗೆ ಹಾಜರಾಗಿರುವ ನಟೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಬೇಕು. ನಟೇಶ್ ಗೆ ತಾಕತ್ತು ಇದ್ದರೆ ಮುಡಾದ ಮುಂಭಾಗದಲ್ಲೇ, ಮುಡಾದ ನಿವೃತ್ತ ನೌಕರರ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

click me!