ಕರ್ನಾಟಕದಲ್ಲಿ ಕೊರೊನಾ ಶಾಕ್ ಜೊತೆಗೆ ಕರೆಂಟ್ ಬಿಲ್ ಶಾಕ್; ಮುಖ್ಯಮಂತ್ರಿಗಳೇ ಏನಿದು ಯಡವಟ್ಟು?

May 10, 2020, 11:09 AM IST

ಬೆಂಗಳೂರು (ಮೇ. 10): ಕರ್ನಾಟಕದಲ್ಲಿ ಕೊರೊನಾ ಶಾಕ್ ಜೊತೆಗೆ ಕರೆಂಟ್ ಬಿಲ್  ಶಾಕ್ ಕೊಟ್ಟಿದೆ ಸರ್ಕಾರ. ಬೆಂಗಳೂರು ಸೇರಿ ಹಲವೆಡೆ ಗ್ರಾಹಕರು ಬಿಲ್ ನೋಡಿ ಗರಂ ಆಗಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳ ಯಡವಟ್ಟಿಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಾಸರಿ ಬಿಲ್ ಹೆಸರಲ್ಲಿ ಡಬಲ್ ಬಿಲ್ ಕೊಟ್ಟು ಕಿರಿಕ್ ಮಾಡುತ್ತಿದ್ದಾರೆ. ಕೆಲವರು ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದು ಕರೆಂಟ್ ಬಳಸದೇ ಇದ್ದರೂ ಸಿಕ್ಕಾಪಟ್ಟೆ ಬಿಲ್ ಬಂದಿದೆ. ಅವೈಜ್ಞಾನಿಕವಾಗಿ ಬಿಲ್ ಜನರೇಟ್ ಮಾಡುತ್ತಿರುವುದಕ್ಕೆ ಜನ ತಿರುಗಿ ಬಿದ್ದಿದ್ದಾರೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ತಿಂಗಳಾನುಗಟ್ಟಲೇ ವಿದ್ಯುತ್ ಬಳಸದಿದ್ದರೂ ಬಿಲ್ ಬಂದಿದೆ. 

ಕೊರೋನಾ ನಿರ್ವಹಣೆ, ದೇಶದಲ್ಲೇ ಯಡಿಯೂರಪ್ಪ ನಂ.2!

ಇಂಧನ ಇಲಾಖೆ ಸದ್ಯ ಸಿಎಂ ಯಡಿಯೂರಪ್ಪ ಬಳಿಯೇ ಇದ್ದು ಅವರ ಗಮನಕ್ಕೆ ಈ ಲೋಪವನ್ನು ತರಲಾಗಿದ್ದು, ಶೀಘ್ರದಲ್ಲೇ ಬಗೆಹರಿಸುವ ವಿಶ್ವಾಸವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

"