Covid 19: ರಾಜ್ಯದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಲ್ಲಿ ಕೋವಿಡ್ ಪತ್ತೆ

Jan 25, 2022, 6:02 PM IST

ಬೆಂಗಳೂರು (ಜ. 25): ರಾಜ್ಯದಲ್ಲಿ ಕೊರೋನಾ (CoronaVirus) ಸೋಂಕು ತೀವ್ರಗೊಳ್ಳುತ್ತಿದೆ, ಆದರೆ ಅಪಾಯಕಾರಿ ಅಲ್ಲ ಎಂದು ತಜ್ಞರು, ಸರ್ಕಾರ ಹೇಳುತ್ತಿದೆ. ಆದರೆ  3ನೇ ಅಲೆಯಲ್ಲಿಯೇ ಅತಿ ಹೆಚ್ಚು 32 ಸಾವು, ಅತಿ ಹೆಚ್ಚು ಪಾಸಿಟಿವಿಟಿ ದರ ಶೇ.33 (Positivity Rate) ಸೋಮವಾರ ದಾಖಲಾಗಿದೆ. ಅಲ್ಲದೆ, ಬರೋಬ್ಬರಿ 16 ಜಿಲ್ಲೆಗಳಲ್ಲಿ ಸೋಂಕಿತರ ಸಾವು ವರದಿಯಾಗಿದೆ.

ಬಿಜೆಪಿಯಿಂದ ಯಾರೂ ಹೊರ ಹೋಗುವ ಪ್ರಶ್ನೆಯಿಲ್ಲ, ಸ್ವಲ್ಪ ದಿನದಲ್ಲೇ ಭಾರೀ ಬದಲಾವಣೆ: ಸಿಎಂ

ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಬರೋಬ್ಬರಿ ಶೇ.33ಕ್ಕೆ ಹೆಚ್ಚಳವಾಗಿದೆ. 3ನೇ ಅಲೆಯಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಇದಾಗಿದೆ. ಇನ್ನು ಎರಡನೇ ಅಲೆಯಲ್ಲಿ ಅತಿ ಹೆಚ್ಚು ಶೇ.36ರಷ್ಟುವರದಿಯಾಗಿತ್ತು.ಕಳೆದ ವಾರ ಹೊಸ ಪ್ರಕರಣಗಳು 40 ಸಾವಿರಕ್ಕೆ ಹೆಚ್ಚಿದ್ದು, ಆ ಸಂದರ್ಭದಲ್ಲಿ ಸೋಂಕಿಗೊಳಗಾಗಿದ್ದ ಶೇ.99 ರಷ್ಟುಮಂದಿ ಚೇತರಿಸಿಕೊಂಡಿದ್ದು, ಹೀಗಾಗಿಯೇ ಗುಣಮುಖ 41 ಸಾವಿರಕ್ಕೆ ಹೆಚ್ಚಿದೆ ಎನ್ನಲಾಗಿದೆ. ಇನ್ನು ಸಾವು ಮತ್ತು ಪಾಸಿಟಿವಿಟಿ ದರ ಹೆಚ್ಚಳದ ನಡುವೆ ಅತಿ ಹೆಚ್ಚು ಸೋಂಕಿತರು ಗುಣಮುಖರಾಗಿರುವುದು ಸಮಾಧಾನಕರ ಸಂಗತಿ.