ಉಡುಪಿ: ತಾಯಿಯ ಶವದ ಬಳಿ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿ ಸಾವು!

By Kannadaprabha News  |  First Published May 19, 2024, 6:45 AM IST

ಕಳೆದ 4 ದಿನಗಳಿಂದ ಈ ಮನೆಯ ಬಾಗಿಲುಗಳು ಮುಚ್ಚಿಕೊಂಡಿದ್ದು, ಶನಿವಾರ ಮನೆಯ ಸಮೀಪ ದುರ್ವಾಸನೆ ಬರುತ್ತಿತ್ತು. ಸ್ಥಳೀಯರು ಮನೆಯ ಬಾಗಿಲು ಒಡೆದು ನೋಡಿದಾಗ, ಜಯಂತಿಯ ಶವ ಕೊಳೆತಿರುವುದು ಕಂಡು ಬಂತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.

ಕುಂದಾಪುರ(ಮೇ.19): ಉಡುಪಿ ಜಿಲ್ಲೆ ಮೂಡುಗೋಪಾಡಿಯಲ್ಲಿ 4 ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಶವದ ಜೊತೆ ಊಟ, ನೀರಿಲ್ಲದೆ ಒಬ್ಬಂಟಿಯಾಗಿ ದಿನ ಕಳೆದ ಬುದ್ಧಿಮಾಂದ್ಯ ಮಗಳು ಸ್ಥಳೀಯರ ಸಮಯಪ್ರಜ್ಞೆಯಿಂದ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾಳೆ. 

ಗ್ರಾಮದ ಜಯಂತಿ ಶೆಟ್ಟಿ (62) ಹಾಗೂ ಪ್ರಗತಿ ಶೆಟ್ಟಿ (32) ಮೃತ ತಾಯಿ, ಮಗಳು. ಪ್ರಗತಿ ಹುಟ್ಟಿನಿಂದಲೇ ಬುದ್ಧಿಮಾಂದ್ಯಳಾಗಿದ್ದು, ಇತ್ತೀಚೆಗೆ ಶುಗರ್ ಕಾಯಿಲೆ ಹೆಚ್ಚಾಗಿ ಆಕೆಯ ಒಂದು ಕಾಲನ್ನೇ ಕತ್ತರಿಸಲಾಗಿತ್ತು. ಪತಿಯ ನಿಧನದ ಬಳಿಕ ಬುದ್ಧಿಮಾಂದ್ಯ ಮಗಳೊಂದಿಗೆ ವಾಸವಿದ್ದ ಜಯಂತಿ, ಅನಾರೋಗ್ಯದಿಂದ ಮೇ 13ರಂದು ಮೃತಪಟ್ಟಿದ್ದಳು. 

Tap to resize

Latest Videos

undefined

'ಗೆಲ್ಲುತ್ತೀ..' ಪಂಜುರ್ಲಿ ದೈವ ಹೇಳಿದೆ, ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ: ರಘುಪತಿ ಭಟ್

click me!