ಕೊರೊನಾ ಲಸಿಕೆ ಪಡೆದವರಲ್ಲಿ ಸೈಡ್ ಎಫೆಕ್ಟ್ ಕಾಣಿಸಿಕೊಂಡ್ರೆ ಏನು ಮಾಡಬೇಕು.?

Jan 2, 2021, 3:36 PM IST

ಬೆಂಗಳೂರು (ಜ. 02): ಇಂದಿನಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ನಡೆದಿದೆ. ಬೆಳಗಾವಿಯ 3 ಆಸ್ಪತ್ರೆಗಳಲ್ಲಿ 75 ಆರೋಗ್ಯ ಕಾರ್ಯಕರ್ತರಿಗೆ  ಡ್ರೈ ರನ್ ನಡೆದಿದೆ. ಲಸಿಕೆ ಕೊಟ್ಟವರಿಗೆ ಸೈಡ್ ಎಫೆಕ್ಟ್ ಕಂಡು ಬಂದಲ್ಲಿ ತುರ್ತು ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಸಿಎಂ ತವರಲ್ಲಿ ಮಹತ್ವದ ಸಭೆ: ಬಿಎಸ್‌ವೈ, ಅರುಣ್ ಸಿಂಗ್ ನೇತೃತ್ವದಲ್ಲಿ ಕಾರ್ಯತಂತ್ರ..!

ಕೊರೊನಾ ಲಸಿಕೆ ಕೊಟ್ಟ ನಂತರ 30 ನಿಮಿಷಗಳ ಕಾಲ ಅಬ್ಸರ್‌ವೇಷನ್‌ನಲ್ಲಿ ಇಡಲಾಗುತ್ತದೆ. ಸೈಡ್ ಎಫೆಕ್ಟ್ ಕಂಡು ಬಂದರೆ ಕೂಡಲೇ ಚಿಕಿತ್ಸೆ ನೀಡಲಾಗುತ್ತದೆ. ಆ ಚಿಕಿತ್ಸೆ ಯಾವ ರೀತಿ ಇರಲಿದೆ ಎಂದು ವೈದ್ಯರು ಮಾತನಾಡಿದ್ದಾರೆ.