ಮತ್ತೆ ಹಿಜಾಬ್ ಪರವಾಗಿ ಮಾತನಾಡಿದ ಸಿದ್ಧರಾಮಯ್ಯ
ಹಿಂದೂ ಹೆಣ್ಮಕ್ಕಳು, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಲ್ವಾ
ಇದನ್ನೇ ಮುಸ್ಲಿಂ ಹೆಣ್ಣು ಮಕ್ಕಳು ಹಾಕಿಕೊಂಡರೇ ತಪ್ಪೇನು ಎಂದು ಪ್ರಶ್ನೆ
ಬೆಂಗಳೂರು (ಮಾ. 25): ಶಾಲಾ ಕಾಲೇಜುಗಳಲ್ಲಿ ಹಿಜಾಬ್ (Hijab) ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಬಹುಮತದ ತೀರ್ಪು ನೀಡಿದ್ದರ ಹೊರತಾಗಿಯೂ (hijab verdict) ಬೇರೆ ಮಾರ್ಗದ ಮೂಲಕ ಹಿಜಾಬ್ ಗೆ ಅವಕಾಶ ಒದಗಿಸಿಕೊಡುವ ಪ್ರಯತ್ನಗಳು ನಡೆದಿವೆ. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ (Siddaramaiah) ಅವರನ್ನು ಮುಸ್ಲಿಂ ಮುಖಂಡರು ಭೇಟಿ ಮಾಡಿದ ಬಳಿಕ ಹಿಜಾಬ್ ಪರವಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದ್ದಾರೆ.
ಗುರುವಾರ ಕಲಾಪದಲ್ಲಿ ಈ ಬಗ್ಗೆ ಮಾತನಾಡಿದ್ದ ಸಿದ್ಧರಾಮಯ್ಯ, ಶುಕ್ರವಾರ ಮೈಸೂರಿನಲ್ಲಿ ಈ ಬಗ್ಗೆ ಮಾತನಾಡುತ್ತಾ ಹಿಂದೂ ಹೆಣ್ಮಕ್ಕಳು (Hindu Womens) ಹಾಗೂ ಸ್ವಾಮೀಜಿಗಳು (Swamiji) ತಲೆ ಮೇಲೆ ಬಟ್ಟೆ ಹಾಕಿಕೊಳ್ತಾರೆ, ಅದೇ ರೀತಿ ಮುಸ್ಲಿಂ ಹೆಣ್ಣು ಮಕ್ಕಳು ಹಾಕಿಕೊಂಡರೇ ನಿಮಗೇನು ಸಮಸ್ಯೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ವಿವಾದಾತ್ಮಕ ಹೇಳಿಕೆಗೆ ಈಗಾಗಲೇ ಪರ ವಿರೋಧ ಚರ್ಚೆಗಳು ಆರಂಭವಾಗಿದೆ.
Hijab Row: 'ಹಿಜಾಬ್ ಬದಲು ದುಪ್ಪಟ್ಟಾಕ್ಕೆ ಅವಕಾಶ ಕೊಡಿ'
ಸೋಮವಾರದಿಂದ ಎಸ್ಸೆಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಬಗ್ಗೆ ಸದನದಲ್ಲಿ ಮಾತನಾಡುವಂತೆ ಮುಸ್ಲಿಂ ಮುಖಂಡರುಗಳು ಬುಧವಾರ ರಾತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅದರಂತೆ ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿದ್ಧರಾಮಯ್ಯ, ಹಿಜಾಬ್ ಇಲ್ಲದೇ ಇದ್ದಲ್ಲಿ ಕನಿಷ್ಠ ದುಪ್ಪಟ್ಟಾ ಆದ್ರೂ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದಿದ್ದರು.