ಕೊರೊನಾ ಸಂಕಷ್ಟದ ನಡುವೆ ಬೇಕಾ ಪಂಚಾಯತ್ ಎಲೆಕ್ಷನ್? ಕಾಂಗ್ರೆಸ್‌ನಿಂದ ತೀವ್ರ ವಿರೋಧ

Apr 19, 2021, 11:09 AM IST

ಬೆಂಗಳೂರು (ಏ. 19): ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸಲು ಹೊರಟಿರುವ ಸರ್ಕಾರ ಹಾಗೂ ಚುನಾವಣಾ ಆಯೋಗದ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಖಂಡಿಸಿದ್ದಾರೆ.

ಆಸ್ಪತ್ರೆಗೆ ಬಂದ್ರೂ ಬೆಡ್ ಸಿಗಲ್ಲ, ಬೆಡ್ ಸಿಕ್ಕರೂ ICU ಸಿಗಲ್ಲ, ಸೋಂಕಿತರ ಗೋಳು ಕೇಳೋರಿಲ್ಲ..!

‘ಮೇ ತಿಂಗಳಾಂತ್ಯಕ್ಕೆ ಜಿ.ಪಂ, ತಾ.ಪಂ, ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಕೊರೋನಾ ಸಮಸ್ಯೆ ಎಲ್ಲಾ ಬಗೆಹರಿದ ಬಳಿಕ ಚುನಾವಣೆ ಮಾಡಬಹುದು. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ. ವಿಧಾನಸಭೆ ಉಪಚುನಾವಣೆಯನ್ನೂ ಸಹ ಮುಂದೂಡಬೇಕಾಗಿತ್ತು. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯನ್ನಾದರೂ ಮುಂದೂಡಿ. ಜನರ ಜೀವಕ್ಕಿಂತ ಚುನಾವಣೆ ಮುಖ್ಯವೇ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.