'ಲವ್ ಯೂ ರಚ್ಚು' ಶೂಟಿಂಗ್ ದುರಂತ: ನಟ ಅಜಯ್ ರಾವ್ ಪ್ರತಿಕ್ರಿಯಿಸಿದ್ಹೀಗೆ

Aug 10, 2021, 12:01 PM IST

ಬೆಂಗಳೂರು (ಆ. 10): 'ಲವ್‌ ಯೂ ರಚ್ಚು' ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಹೈಟೆನ್ಷನ್‌ ವೈರ್‌ ತಗುಲಿ ಸಹಾಯಕ ಫೈಟರ್‌ ಒಬ್ಬರು ಮೃತಪಟ್ಟು ಮತ್ತೊಬ್ಬ ಕಲಾವಿದ ಗಂಭೀರವಾಗಿ ಗಾಯ​ಗೊಂಡಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಘೋರ ದುರಂತ ಹೇಗಾಯಿತು? ಕುಟುಂಬಸ್ಥರ ಕಣ್ಣೀರು

ತಮಿ​ಳು​ನಾಡು ಮೂಲದ ಸಹಾ​ಯಕ ಫೈಟರ್‌ ವಿವೇಕ್‌(28)ಮೃತಪಟ್ಟವರು. ಈ ದುರಂತದ ಬಗ್ಗೆ ನಟ ಅಜಯ್ ರಾವ್ ಪ್ರತಿಕ್ರಿಯಿಸಿದ್ದಾರೆ.' ದುರಂತ ನಡೆಯುವಾಗ ನಾನು ಕ್ಯಾರವಾನ್‌ನಲ್ಲಿದ್ದೆ. ಅಲ್ಲಿದ್ದವರು ಹೇಳಿದ್ರು. ನಾನು ಹೋಗಿ ನೋಡಿದಾಗ ಸಾವನ್ನಪ್ಪಿರುವುದು ಗೊತ್ತಾಯಿತು. ಹೈ ಟೆನ್ಷನ್ ವೈರ್ ಇದ್ದಲ್ಲಿ ಫೈಟ್ ಮಾಡಬಾರದಿತ್ತು. ದುರಂತ ನಡೆದಿದೆ' ಎಂದಿದ್ದಾರೆ.