ವ್ಯಕ್ತಿಯೊಬ್ಬ ಆತ್ಮಹತ್ಯೆ ಬೆದರಿಕೆ ಹಾಕಿ ಖಾಸಗಿ ಬ್ಯಾಂಕ್‌ನಿಂದ 40 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಂಗಳವಾರ ಮಧ್ಯಾಹ್ನ ಮುಸುಕುಧಾರಿ ವ್ಯಕ್ತಿಯೊಬ್ಬ ಖಾಸಗಿ ಬ್ಯಾಂಕ್ ಮ್ಯಾನೇಜರ್ ಕ್ಯಾಬಿನ್‌ಗೆ ನುಗ್ಗಿದ್ದಾನೆ. ತನ್ನ ಜೊತೆಯಲ್ಲಿ ಸೂಸೈಡ್ ನೋಟ್ ಮತ್ತು ಚೀಲವೊಂದನ್ನು ತೆಗೆದುಕೊಂಡ ಬಂದಿದ್ದನು. ತನ್ನ ಮೇಲೆ 38.5 ಲಕ್ಷ ರೂಪಾಯಿ ಗೃಹ ಸಾಲ ಬಾಕಿ ಇದೆ ಮತ್ತು ಆಸ್ತಿಯನ್ನು ಹರಾಜು ಹಾಕಲಾಗುತ್ತಿದೆ . ಇದರಿಂದ ತನ್ನ ಮಕ್ಕಳು ಬೀದಿಪಾಲಾಗುತ್ತಾರೆ ಎಂದು ಮ್ಯಾನೇಜರ್ ಮುಂದೆ ದರೋಡೆಕೋರ ಹೇಳಿದ್ದಾನೆ.
ಇದೇ ರೀತಿ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಜೊತೆ ಸುಮಾರು 30 ನಿಮಿಷ ತನ್ನ ಸಾಲದ ಬಗ್ಗೆ ಮಾತನಾಡಿದ್ದಾನೆ. ನಂತರ ಹಠಾತ್ತನೆ 40 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ತನ್ನ ಬೇಡಿಕೆ ಈಡೇರಿಸದಿದ್ದರೆ ಬ್ಯಾಂಕ್ ಮ್ಯಾನೇಜರ್‌ರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆಚ್ಚಿಬಿದ್ದ ಮ್ಯಾನೇಜರ್ ತನ್ನ ಪ್ರಾಣವನ್ನು ಪಣಕ್ಕಿಟ್ಟು ಕ್ಯಾಷಿಯರ್‌ರನ್ನು ಕರೆದು ಮುಸುಕುಧಾರಿಗೆ 40 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
2500 ರೂ.ಗೆ 3 ಪ್ರೀಮಿಯಂ ವಿಸ್ಕಿ, 5 ಬಿಯರ್ ಬಾಟೆಲ್ ಸೇರಿ 10 ವಸ್ತುಗಳು: 17 ವರ್ಷದ ಹಿಂದಿನ ಬಿಲ್ ವೈರಲ್
ಬ್ಯಾಂಕ್‌ನಲ್ಲಿ 25 ಜನರಿದ್ದರು
ಘಟನೆ ನಡೆದ ಸಮಯದಲ್ಲಿ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ 10-12 ಸಿಬ್ಬಂದಿ ಸೇರಿದಂತೆ ಸುಮಾರು 25-26 ಜನರಿದ್ದರು ಯಾರಿಂದಲೂ ಏನು ಮಾಡಲು ಸಾಧ್ಯವಾಗಿಲ್ಲ. ಕಾರಣ ಮ್ಯಾನೇಜರ್ ಮತ್ತು ಕ್ಯಾಷಿಯರ್ ಲೂಟಿಕೋರನನ್ನು ಹೊರಗೆ ಕಳುಹಿಸಿದರು. ದರೋಡೆಕೋರ ಗನ್ ಹಿಡಿದುಕೊಂಡಿದ್ದರಿಂದ ಮ್ಯಾನೇಜರ್ ಮತ್ತು ಕ್ಯಾಷಿಯರ್ ಆತನನ್ನು ಹೊರಗೆ ಕಳುಹಿಸಿದ್ದಾರೆ. ಈ ಘಟನೆ ಧೀಮಾನ್‌ಪುರದಲ್ಲಿರುವ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ನಡೆದಿದೆ ಎಂದು ಶಾಮ್ಲಿ ಎಸ್ಪಿ ರಾಮ್‌ಸೇವಕ್ ಗೌತಮ್ ತಿಳಿಸಿದ್ದಾರೆ. ಶಾಖಾ ವ್ಯವಸ್ಥಾಪಕ ನಮನ್ ಜೈನ್ ಲೂಟಿಕೋರನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ದರೋಡೆಕೋರನ ಬಳಿ ಬೇರೆ ಯಾವುದೇ ಮಾರಕಾಸ್ತ್ರಗಳನ್ನು ನೋಡಿಲ್ಲ. ಶಾಖೆಯ ಭದ್ರತಾ ಸಿಬ್ಬಂದಿ ಬಳಿ ಗನ್ ಇತ್ತು. ಆದರೂ ದರೋಡೆಕೋರನನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ರಾಮ್‌ಸೇವಕ್ ಗೌತಮ್ ಮಾಹಿತಿ ನೀಡಿದ್ದಾರೆ.
ದರೋಡೆಕೋರನ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಬ್ಯಾಂಕ್ ಸಿಬ್ಬಂದಿ ಹಾಗೂ ಆ ವೇಳೆ ಅಲ್ಲಿದ್ದ ಎಲ್ಲಾ ಗ್ರಾಹಕರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
56 ವರ್ಷ ಹಿಂದೆ ಮೃತ 4 ಯೋಧರ ಶವ ಹಿಮದಲ್ಲಿ ಪತ್ತೆ