ಮಲೇಶಿಯಾದಲ್ಲಿ ಕೂತು 'ಮಾಸ್' ಸಿನಿಮಾ ಸುಳಿವು ಕೊಟ್ಟ ರಾಕಿ: ಕೆಜಿಎಫ್ ಮೀರಿಸುತ್ತಾ ಯಶ್ 19 ಸಿನಿಮ ?

Jul 11, 2023, 2:56 PM IST

ರಾಕಿ ದೊಡ್ಡ ಸಿನಿಮಾಗೆ ಗುರಿ ಇಟ್ಟಿರೋದಂತು ನಿಜ. ಆ ಸಿನಿಮಾ ಹೇಗಿರಬೇಕು ಅಂದ್ರೆ ಕೆಜಿಎಫ್(KGF) ಅನ್ನೂ ಮೀರಿಸುವಂತಿರಬೇಕು ಅನ್ನೋ ಆಸೆ ಯಶ್ರದ್ದು. ಯಾವಾಗ್ಲೂ ನೆಕ್ಸ್ಟ್ ಲೆವೆಲ್ಅನ್ನೇ ಯೋಚ್ನೆ ಮಾಡೋ ಯಶ್(Yash) ಈ ಭಾರಿಯೂ ಅದೇ ಪ್ಲಾನಿಂಗ್‌ನಲ್ಲಿದ್ದಾರೆ. ಹೀಗಾಗೆ ಮಲೇಶಿಯಾದಲ್ಲಿ ಮಾತನಾಡಿರೋ ರಾಕಿಂಗ್ ಸ್ಟಾರ್ ನಾನು ಮಾಡಿದ್ರೆ ಮಾಸ್ ಸಿನಿಮಾ ಮಾಡೋದು ಅದಕ್ಕಾಗಿ ಎಲ್ಲಾ ತಯಾರಿ ನಡೆದಿದೆ. ಕೆಲವು ದಿನಗಳಲ್ಲಿಯೇ ಸಿನಿಮಾದ ಘೋಷಣೆ ಮಾಡುತ್ತೇನೆ ಎಂದಿದ್ದಾರೆ. ಈ ಸಿನಿಮಾ ಕೆಜಿಎಫ್ ಸಿನಿಮಾಗಿಂತ ನೆಕ್ಸ್ಟ್ ಲೆವೆಲ್‌ನಲ್ಲಿರುತ್ತೆ ಅನ್ನೋದು ರಾಕಿ ಆಪ್ತಬಳಗದ ಆನ್ಸರ್ ಆಗಿದೆ. ಯಶ್ 19 ಸಿನಿಮಾ(Yash 19 Cinema) ಅನೌನ್ಸ್ ಯಾವಾಗ ಅನ್ನೋ ಪ್ರಶ್ನೆ ರಾಕಿಯ ಎಲ್ಲಾ ಅಭಿಮನಿಗಳ ಮನದಲ್ಲಿದೆ. ಆದ್ರೆ ಅದಕ್ಕೆ ಉತ್ತರ ಮಾತ್ರ ಸಧ್ಯದಲ್ಲೇ ಅಂತಾರೆ ಯಶ್. ಹಾಗಾದ್ರೆ ಈ ಸಿನಿಮಾವನ್ನ ಯಶ್ ಯಾವಾಗ ಹೇಳ್ಬಹುದು. ಆ ರೈಟ್ ಟೈಂ ಯಾವಾಗ ಬರುತ್ತೆ ಅಂತ ಕೇಳಿದ್ರೆ, ಶ್ರಾವಣ ಮಾಸ ಅಥವಾ ಗೌರಿ-ಗಣೇಶನ ಹಬ್ಬಕ್ಕೆ ಅನೌನ್ಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರ ನಡೆದಿದೆ.

ಇದನ್ನೂ ವೀಕ್ಷಿಸಿ:  ಚಕ್ರವರ್ತಿ ಸೂಲಿಬೆಲೆ ನೆಚ್ಚಿನ ಶಿಷ್ಯನ ಹತ್ಯೆ: ಸ್ನೇಹಿತರಿಂದಲೇ ಕೊಲೆಯಾದ್ನ ದಲಿತ ಯುವಕ ?