ವಿಜಯ್-ಸ್ಪಂದನಾ ಲವ್ ಸ್ಟೋರಿಯೇ ರೋಚಕ: ಕಾಫಿ ಡೇಯಲ್ಲಿ ಶುರುವಾಯ್ತು  ಲವ್ ಕಹಾನಿ..!

ವಿಜಯ್-ಸ್ಪಂದನಾ ಲವ್ ಸ್ಟೋರಿಯೇ ರೋಚಕ: ಕಾಫಿ ಡೇಯಲ್ಲಿ ಶುರುವಾಯ್ತು ಲವ್ ಕಹಾನಿ..!

Published : Aug 08, 2023, 09:48 AM IST

ಸ್ಪಂದನಾ ವಿಜಯ ರಾಘವೇಂದ್ರ ದಂಪತಿಗಳು ಅನೋನ್ಯವಾಗಿ ಜೀವನ ನಡೆಸ್ತಿದ್ರು. ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಇಬ್ಬರಲ್ಲಿತ್ತು. ಸ್ಪಂದನಾ ಅವರಲ್ಲೇ ತನ್ನ ತಾಯಿಯನ್ನ ಕಾಣ್ತಿದ್ದ ವಿಜಯ ತುಂಬಾನೇ ಅಂದ್ರೆ ತುಂಬಾ ಪ್ರೀತಿಸುತ್ತಿದ್ದರು.
 

ವಿಜಯ ರಾಘವೇಂದ್ರ- ಸ್ಪಂದನಾ ಸ್ಯಾಂಡಲ್‌ವುಡ್‌ನ ಅಪರೂಪದಲ್ಲೇ ಅಪರೂಪದ ಜೊಡಿ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು  ಜೀವನಕ್ಕೆ ಆಸರೆಯಾಗಿ ಆದರ್ಶ ದಂಪತಿಗಳಾಗಿ ಜೀವನ ನಡೆಸ್ತಿದ್ರು. 15 ವರ್ಷಗಳ ಹಿಂದೆ ವಿಜಯ್ ರಾಘವೇಂದ್ರ(Vijaya Raghavendra) ಮತ್ತು ಸ್ಪಂದನಾ(Spandana) ಪ್ರೀತಿಸಿ  ಮದ್ವೆಯಾಗಿದ್ರು. ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ಸ್ಪಂದನಾ, ವಿಜಯ ರಾಘವೇಂದ್ರ ಜೊತೆ 26 ಆಗಸ್ಟ್‌ 2007ರಂದು ಮದುವೆ ಆಗಿದ್ದರು. ನಿವೃತ್ತ ಪೊಲೀಸ್‌ ಅಧಿಕಾರಿ ಡಿ.ಕೆ ಶಿವರಾಮ್‌ ಮಗಳಾಗಿದ್ದ ಸ್ಪಂದನಾ - ವಿಜಯ ರಾಘವೇಂದ್ರ ದಂಪತಿಗೆ ಶೌರ್ಯ(Shaurya) ಎಂಬ ಮಗ ಇದ್ದಾನೆ. ವಿಜಯ ರಾಘವೇಂದ್ರ-ಸ್ಪಂದನಾ ಪ್ರೀತಿಸಿ ಮದುವೆಯಾಗಿದ್ರು. ಮದುವೆ ಬಳಿಕವೂ ಪ್ರೇಮಿಗಳಂತೆಯೇ ಅನೋನ್ಯವಾಗಿಯೇ ಇದ್ದರು. ಮೊದಲಿಗೆ ಸ್ಪಂದನಾ ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ, ಮೊದಲ ಬಾರಿ ಸ್ಪಂದನ ಅವರನ್ನ ನೋಡಿದ ವಿಜಯರಾಘವೇಂದ್ರ ಮೊದಲ ನೋಟದಲ್ಲೇ ಕಳೆದು ಹೋಗಿದ್ರು. 2007ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ(Coffee Day) ಸ್ಪಂದನಾರನ್ನ ನೋಡಿದ ವಿಜಯ ರಾಘವೇಂದ್ರ ಮೊದಲ ಬಾರಿ ಮಾತಾಡಿಸ್ತಾರೆ. ಅಲ್ಲಿಂದಲೇ ಈಬ್ಬರ ನಡುವೆ ಪ್ರೀತಿ ಶುರವಾಯ್ತು. ಎರಡನೇ ಬಾರಿ ಭೇಟಿ ವೇಳೆ ಹೇಗಾದ್ರೂ ಸರಿ, ಸ್ಪಂದನಾರನ್ನೇ ಮದುವೆಯಾಗಬೇಕು ಎಂದು ವಿಜಯ ರಾಘವೇಂದ್ರ ನಿರ್ಧರಿಸ್ತಾರೆ. ಕೆಲವೇ ದಿನಗಳಲ್ಲಿ ತಮ್ಮ ಪ್ರೀತಿಯನ್ನ ಸ್ಪಂದನಾ ಬಳಿ ವಿಜಯರಾಘವೇಂದ್ರ ಹೇಳಿಕೊಳ್ತಾರೆ. ವಿಜಯರಾಘವೇಂದ್ರ ಅವರ ಪ್ರೀತಿಗೆ ಸ್ಪಂಧನಾ ಕೂಡಾ ಒಪ್ಪಿಗೆ ನೀಡ್ತಾರೆ. ಸ್ಪಂದನಾ ಯಾರು ಏನು ಎಂಬುವುದನ್ನೇ ತಿಳಿದುಕೊಳ್ಳದೇ ವಿಜಯ್ರಾಘವೇಂದ್ರ  ಪ್ರೀತಿ ಮಾಡಿರ್ತಾರೆ. ಆದ್ರೆ ಸ್ಪಂದನಾ ಪೊಲೀಸ್ ಅಧಿಕಾರಿ ಮಗಳು ಎಂದು ವಿಜಯರಾಘವೇಂದ್ರಗೆ ಗೊತ್ತಾಗಿದ್ದೇ ತಡವಾಗಿ, ಇವರ ಪ್ರೀತಿ ಕೊನೆಗೂ  ಇಬ್ಬರ ಮನೆಯವರಿಗೂ ತಿಳಿಯುತ್ತದೆ.ಮನೆಯಲ್ಲಿ  ಮದುವೆಗೂ ಒಪ್ಪಿಗೆಯೂ ನೀಡ್ತಾರೆ.

ಇದನ್ನೂ ವೀಕ್ಷಿಸಿ:  ಸ್ಪಂದನಾ ಬಗ್ಗೆ ನಿರ್ದೇಶಕಿ ರೇಖಾ ರಾಣಿ ಭಾವುಕ ನುಡಿ.. ಅದರಲ್ಲೇನಿದೆ ಗೊತ್ತಾ ?

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?