Jul 8, 2022, 3:58 PM IST
ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದರ ಹೆಸರು ‘ಟೈಗರ್ ಟಾಕೀಸ್’. ಈ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್ ಕುಮಾರ್ ನಿರ್ದೇಶನದ, ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.
ಹೇಳಿದ್ದಕ್ಕಿಂತ ಜಾಸ್ತಿ ದುಡ್ಡು ಹಾಕಿದ್ರು; ವಿನೋದ್ ಪ್ರಭಾಕರ್ ಬಗ್ಗೆ ನಿರ್ದೇಶಕರ ಮಾತು
ಅಪಾರ್ಥ ಮಾಡ್ಕೋಬೇಡಿ... ಡೈಲಾಗ್ ಖ್ಯಾತಿಯ ಉಮೇಶ್ ಅವರೂ ಕಾರ್ಯಕ್ರಮಕ್ಕೆ ಆಗಮಿಸಿ, ವೇದಿಕೆಯಲ್ಲಿ ಕಾಮಿಡಿ ಕಚಗುಳಿ ಇಟ್ಟರು. ಚಿತ್ರತಂಡಕ್ಕೆ ಶುಭ ಹಾರೈಸಿದರು.