ಛಾಯಾ ಸಿಂಗ್ 12 ವರ್ಷಗಳ ದಾಂಪತ್ಯ; 10 ದಿನ ಒಟ್ಟಿಗೆ ಕಳೆಯೋದೂ ಕಷ್ಟ!

First Published | Nov 18, 2024, 8:02 PM IST

ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯ ನಟಿ ಛಾಯಾ ಸಿಂಗ್ ತಮ್ಮ 12 ವರ್ಷಗಳ ದಾಂಪತ್ಯದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕಾರಣ, ವರ್ಷಕ್ಕೆ ಕೇವಲ 10 ದಿನ ಮಾತ್ರ ಪತಿಯೊಂದಿಗೆ ಕಳೆಯಲು ಸಾಧ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' (Amrutadhare) ವಿಭಿನ್ನ ಕಥಾಹಂದರ ಹೊಂದಿದ್ದು, ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಈ ಚಿತ್ರದ ಕಥಾನಾಯಕಿ ಭೂಮಿಕಾ ಹಾಗೂ ಆಕೆಯ ಸುತ್ತ ಸುತ್ತಿರುವ ಮದುವೆಯ ಕಥೆ ಬಲು ರೋಚಕವಾಗಿದೆ. ಅಂದಹಾಗೆ ಬಹುತೇಕರಿಗೆ ತಿಳಿದಿರುವಂತೆ ನಟಿ ಛಾಯಾ ಸಿಂಗ್​ ಸ್ಯಾಂಡಲ್‌ವುಡ್​ ನಟಿ. ಮೊನ್ನೆಯಷ್ಟೇ ಇವರ ನಟನೆಗೆ ಭೈರತಿ ರಣಗಲ್​ ಚಿತ್ರ ಭರ್ಜರಿಯಾಗಿ ಓಡುತ್ತಿದೆ. 2000ರಲ್ಲಿ ತೆರೆಕಂಡ 'ಮುನ್ನುಡಿ' ಅವರ ಮೊದಲ ಸಿನಿಮಾ. ವಿಶೇಷವೆಂದರೆ, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಅವರು, ಆನಂತರ ತಮಿಳಿಗೆ ಕಾಲಿಟ್ಟರು. ನಂತರ ಮಲಯಾಳಂ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.  ಒಟ್ಟು 38 ಚಿತ್ರಗಳಲ್ಲಿ ನಟಿಸಿರುವುದಾಗಿ ನಟಿ ತಿಳಿಸಿದ್ದಾರೆ. ಮದುವೆಯಾದ ಬಳಿಕ ತಮ್ಮ 20 ವರ್ಷಗಳ ಬಣ್ಣದ ಲೋಕಕ್ಕೆ ಸ್ವಲ್ಪ ಬ್ರೇಕ್​ ಕೊಟ್ಟಿದ್ದರು. ಈಗ ಪುನಃ ಅಮೃತಧಾರೆ ಮೂಲಕ  ಕಿರುತೆರೆಗೆ ಮರಳಿದ್ದಾರೆ.

Latest Videos


ಇದೀಗ ಇವರು ಕಲಾಮಾಧ್ಯಮ ಯೂಟ್ಯೂಬ್​ ಚಾನೆಲ್​ ಜೊತೆ ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ತಮ್ಮ ಮತ್ತು ಪತಿ ಕೃಷ್ಣ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಕೃಷ್ಣ ಅವರು ಛಾಯಾ ಅವರಿಗೆ ಪರಿಚಯವಾದದ್ದು ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು.

'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು.

2012ರಲ್ಲಿ ಇವರ ಮದುವೆಯಾಗಿದ್ದು, 12 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಇವರ ಮದುವೆಯ ಸ್ಟೋರಿಯೂ ಚೆನ್ನಾಗಿದೆ. ಕೃಷ್ಣ ಮತ್ತು ನಮ್ಮಮ್ಮ ಮಾತನಾಡಿಕೊಳ್ತಿದ್ರು. ನನಗೆ ಗೊತ್ತೇ ಇರಲಿಲ್ಲ. ಅದೊಂದು ದಿನ ಕೃಷ್ಣ ಅವರೇ ನನ್ನ ಅಮ್ಮನ ಬಳಿ ಬಂದು ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ, ಮದ್ವೆಯಾಗ್ತೇನೆ ಎಂದರು.

ಅಮ್ಮ ಓಕೆ ಅಂದುಬಿಟ್ರು. ನನಗೆ ಏನು ಆಗ್ತಿದೆ ಎಂದೇ ನಿಜಕ್ಕೂ ಗೊತ್ತಿರಲಿಲ್ಲ. ಹೀಗೆ ನಮಗೆ ಮದ್ವೆಯಾಯ್ತು. ಆದರೆ ಕೃಷ್ಣ ಇರುವುದು ಚೆನ್ನೈನಲ್ಲಿ, ಛಾಯಾ ಇರುವುದು ಬೆಂಗಳೂರಿನಲ್ಲಿ. ಇಬ್ಬರೂ ಶೂಟಿಂಗ್​ನಲ್ಲಿ ಬಿಜಿ. ಇದೇ ಕಾರಣಕ್ಕೆ ವರ್ಷದಲ್ಲಿ 10 ದಿನ ಕೂಡ ಒಟ್ಟಿಗೇ ಇರುವುದು ಕಷ್ಟವಾಗುತ್ತಿದೆ ಎಂದು ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ ಛಾಯಾ.

chaya singh

ಕೃಷ್ಣ ಮತ್ತು ಅವರ ಅಪ್ಪ-ಅಮ್ಮ ತುಂಬಾ ಒಳ್ಳೆಯವರು. ಅಂಥವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಈಗ ಒಂದೂವರೆ ವರ್ಷ ಆಗೋಯ್ತು. ನಾವಿಬ್ಬರೂ ಮೀಟ್ ಆಗದೆ. ಅವ್ರು ಬಿಡುವಾದಾಗ ಅವ್ರು ಬರ್ತಾರೆ, ನಾನು ಬಿಡುವಾದಾಗ ನಾನು ಹೋಗ್ತೀನಿ, ಇಡೀ ವರ್ಷದಲ್ಲಿ ಜೊತೆಯಲ್ಲಿ ಕಡೆಯುವ ಕ್ಷಣಗಳು 10 ದಿನ ಆದ್ರೆ ಹೆಚ್ಚು ಎಂದಿದ್ದಾರೆ.

Chaya Singh Zee Kannada Amruthadhare

ಉಳಿದ ದಿನಗಳಲ್ಲಿ ವಿಡಿಯೋ ಕಾಲ್​, ಫೋನ್​ನಲ್ಲಿಯೇ ಆಗುತ್ತದೆ. ಆದರೆ ಇದುವರೆಗೂ ಅವರು ಇದರ ಬಗ್ಗೆ ಯಾವುದೇ ಕಂಪ್ಲೇಂಟ್​ ಮಾಡಲಿಲ್ಲ. ಅವರು ತುಂಬಾ ಸಪೋರ್ಟಿವ್​. ಈಗ ತಮಿಳಿನ ಸೀರಿಯಲ್​ ಸಿಕ್ಕಿದೆ. ಅದಕ್ಕೂ ಅವರು ಪರವಾಗಿಲ್ಲ ಮಾಡು, ಅವಕಾಶ ಸಿಕ್ಕಾಗ ಬಿಡಬಾರದು ಎನ್ನುತ್ತಾರೆ. ವರ್ಲ್ಡ್​ ಟೂರ್​ಗೆ ಹೋಗುವ ಪ್ಲ್ಯಾನ್​ ಇದೆ. ಅದನ್ನು ಇಬ್ಬರಿಗೂ ಬಿಡುವಾದಾಗ ಮಾಡೋಣ ಎಂದಿದ್ದಾರೆ.  ಹೀಗೆ ನನಗೆ ತುಂಬಾ ಸಪೋರ್ಟ್​ ಮಾಡುತ್ತಾರೆ ಎಂದು ನಟಿ ಹೇಳಿದ್ದಾರೆ.

click me!