Breaking: ಸಮುದ್ರದಲ್ಲಿ ಭಾರತ-ಪಾಕಿಸ್ತಾನ ಹಡಗಿನ ನಡುವೆ ಭಾರೀ ಫೈಟ್‌, 7 ಮಂದಿ ಮೀನುಗಾರರ ರಕ್ಷಣೆ!

By Santosh Naik  |  First Published Nov 18, 2024, 7:55 PM IST

ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆಯಿಂದ ಬಂಧಿಸಲ್ಪಟ್ಟ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಪಿಎಂಎಸ್‌ಎ ಹಡಗಿನ ಪ್ರಯತ್ನದ ನಡುವೆಯೂ ಐಸಿಜಿ ಮೀನುಗಾರರನ್ನು ರಕ್ಷಿಸಿದೆ. ಭಾರತೀಯ ಮೀನುಗಾರಿಕಾ ದೋಣಿ ಘಟನೆಯಲ್ಲಿ ಹಾನಿಗೊಳಗಾಗಿ ಮುಳುಗಿದೆ.


ನವದೆಹಲಿ (ನ.18): ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್‌ಎ) ಹಡಗಿನಿಂದ ಬಂಧಿಸಲ್ಪಟ್ಟಿದ್ದ ಏಳು ಭಾರತೀಯ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಹಡಗು ರಕ್ಷಿಸಿದೆ. ಪಿಎಂಎಸ್‌ಎ ಹಡಗಿನ ಭಾರೀ ಪ್ರಯತ್ನದ ನಡುವೆಯೂ ಐಸಿಜಿ ಭಾನುವಾರ (ನವೆಂಬರ್ 17) ಮೀನುಗಾರರನ್ನು ರಕ್ಷಿಸಿದೆ. ಭಾರತೀಯ ಹಡಗು ಪಾಕಿಸ್ತಾನದ ಹಡಗನ್ನು ತಡೆದು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.

"ಭಾರತೀಯ ಕೋಸ್ಟ್ ಗಾರ್ಡ್ (ICG) ಹಡಗು ನವೆಂಬರ್‌ 17 ರಂದು  ಏಳು ಭಾರತೀಯ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿತು, ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (PMSA) ಹಡಗಿನಿಂದ ಇವರನ್ನು ಬಂಧಿಸಲಾಗಿತ್ತು. PMSA ಹಡಗಿನ ಭಾರೀ ಪ್ರಯತ್ನಗಳ ಹೊರತಾಗಿಯೂ, ICG ಹಡಗು PMSA ಅನ್ನು ತಡೆದಿತ್ತು. ಹಡಗು ಮತ್ತು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಅವರಿಗೆ ಸೂಚನೆ ನೀಡಿತ್ತು ”ಎಂದು ಐಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

"ಐಸಿಜಿ ಹಡಗು ಏಳು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲು ಸಾಧ್ಯವಾಗಿದೆ. ಅವರೆಲ್ಲರ ಆರೋಗ್ಯ ಉತ್ತಮವಾಗಿದೆ. ದುರದೃಷ್ಟವಶಾತ್, ಭಾರತೀಯ ಮೀನುಗಾರಿಕಾ ದೋಣಿ ಕಾಲ ಭೈರವ ಘಟನೆಯ ಸಮಯದಲ್ಲಿ ಹಾನಿಗೊಳಗಾಗಿದೆ ಮತ್ತು ಮುಳುಗಿದೆ' ಎಂದು ಐಜಿಸಿ ತಿಳಿಸಿದೆ.

Latest Videos

undefined

ಅಡುಗೆಮನೆಯಲ್ಲಿ ಗ್ಯಾಸ್‌ ಸ್ಟವ್‌ ವಾಸ್ತು ನೋಡಿ ಇಡಿ, ಈ ತಪ್ಪುಗಳು ಮಾಡಿದ್ರೆ ಸುತ್ತಿಕೊಳ್ಳುತ್ತೆ ದರಿದ್ರ!

"ಐಸಿಜಿ ಹಡಗು ನವೆಂಬರ್ 18 ರಂದು ಓಖಾ ಬಂದರನ್ನು ತಲುಪಿದೆ. ಅಲ್ಲಿ ಐಸಿಜಿ, ರಾಜ್ಯ ಪೊಲೀಸ್, ಗುಪ್ತಚರ ಸಂಸ್ಥೆಗಳು ಮತ್ತು ಮೀನುಗಾರಿಕೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖೆ ಘರ್ಷಣೆಗೆ ಕಾರಣವಾದ ಸಂದರ್ಭಗಳನ್ನು ಮತ್ತು ನಂತರದ ರಕ್ಷಣಾ ಕಾರ್ಯಾಚರಣೆಯನ್ನು ತನಿಖೆ ಮಾಡಲಿದೆ.

Bengaluru: ಪ್ರಯಾಣಿಕರ ಎದುರು ಸ್ಟಾರ್ಟ್‌ಅಪ್‌ ಕನಸು ಬಿಚ್ಚಿಟ್ಟ ಬೆಂಗಳೂರಿನ ಆಟೋ ಡ್ರೈವರ್‌!

Indian Coast Guard ship Agrim deployed close to the maritime boundary line with Pakistan chased the Pakistan Maritime Security Agency ship PMS Nusrat after a chase of around two hours and clearly told them that under no condition, it would allow the Pakistani ship to take away… pic.twitter.com/ErPvkqR3yv

— ANI (@ANI)
click me!