ಅಂಬಿ ಬರ್ತಡೇ ದಿನ ಸುಮಲತಾ ಹಂಚಿಕೊಂಡ್ರು ವಿಶೇಷ ವಿಡಿಯೋ

Jun 1, 2022, 4:20 PM IST

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವನ್ನ ಇತ್ತೀಚಿಗಷ್ಟೇ ಸಂಭ್ರಮದಿಂದ ಆಚರಣೆ ಮಾಡಲಾಯ್ತು. ಅಂಬಿ (Ambareesh) 70ನೇ ವರ್ಷದ ಹುಟ್ಟುಹಬ್ಬವನ್ನ (Birthday) ಅಭಿಮಾನಿಗಳು ಹಾಗೂ ಮನೆ ಮಂದಿ ಖುಷಿ ಖುಷಿಯಿಂದ ಸೆಲಬ್ರೇಟ್ ಮಾಡಿದ್ರು. ಬರ್ತಡೇ ವಿಶೇಷವಾಗಿ ನಟಿ ಸುಮಲತಾ (Sumalatha) ತಮ್ಮ ಮನೆಯ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ಅಯ್ಯೋ... ಇಂಟರ್‌ವ್ಯೂನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಕೃತಿ ಶೆಟ್ಟಿ..?

ಅಂಬಿ ಹುಟ್ಟುಹಬ್ಬಕ್ಕಾಗಿ ಮನೆಯನ್ನ ಹಬ್ಬದ ದಿನದಂತೆ ಸಿಂಗಾರ ಮಾಡಿಸಲಾಗಿದೆ. ಬಗೆಬಗೆಯ ಹೂಗಳು ಹಾಗೂ ಅಂಬಿ ಸ್ನೇಹಿತರು ಕೊಟ್ಟ ಹೂಗುಚ್ಛಗಳನ್ನ ಅಂಬಿ ಫೋಟೋ ಮುಂದಿಟ್ಟು ಕೇಕ್ ಕಟ್ ಮಾಡಲಾಗಿದೆ. ಆದ್ರೆ ಇಷ್ಟೆಲ್ಲಾ ಸಿಂಗಾರವಾಗಿರೋ ಮನೆಯಲ್ಲಿ ಮನೆಯ ಒಡೆಯನೇ ಇಲ್ಲ ಅನ್ನೋದು ಅಭಿಮಾನಿಗಳ ಬೇಸರವಾಗಿದೆ...