Shiva Rajkumar: ಓಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ 'ಭಜರಂಗಿ 2' ಸಿನಿಮಾ

Jan 12, 2022, 2:04 PM IST

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ 'ಭಜರಂಗಿ 2' (Bhajarangi 2) ಚಿತ್ರ ಜೀ 5 (Zee5) ಓಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು, ಇದೀಗ ಈ ಸಿನಿಮಾ ಹೊಸ ದಾಖಲೆ ಸೃಷ್ಟಿಸಿದೆ. ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಅಷ್ಟು ಸೌಂಡ್ ಮಾಡಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ 'ಭಜರಂಗಿ 2' ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಈ ಸಿನಿಮಾ ಜೀ 5ನಲ್ಲಿ ಬಿಡುಗಡೆಯಾದ 16 ದಿನಗಳಲ್ಲಿ ಭರ್ಜರಿ ದಾಖಲೆ (Record) ಮಾಡಿದೆ. ಹೌದು! ಡಿಸೆಂಬರ್ 23ರಂದು 'ಭಜರಂಗಿ 2' ಸಿನಿಮಾ ಜೀ 5 ಓಟಿಟಿಯಲ್ಲಿ ತೆರೆಕಂಡಿತ್ತು. 

ಶಿವಣ್ಣ ಒಬ್ರ ಇದ್ರೆ ಏನ್ ಮಾಡ್ತಾರೆ? ಯಾರಿಗೂ ಗೊತ್ತಿರದ 3 ವಿಚಾರಗಳಿವು!

ಮೊದಲ ಮೂರು ದಿನವೇ ಶಿವಣ್ಣನ ಸಿನಿಮಾವನ್ನು 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಈ ಮಟ್ಟಿಗೆ ಇಷ್ಟು ಕಡಿಮೆ ಸಮಯದಲ್ಲಿ ದಾಖಲೆ ಮಾಡಿದ ಮೊದಲ ಸಿನಿಮಾವೆಂಬ ಹೆಗ್ಗಳಿಕೆಗೆ 'ಭಜರಂಗಿ 2' ಪಾತ್ರವಾಗಿತ್ತು. ಈಗ 16ನೇ ದಿನಕ್ಕೆ ಮತ್ತೊಂದು ಮೈಲಿಗಲ್ಲು ತಲುಪಿದ್ದು, 10 ಕೋಟಿ ನಿಮಿಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಎ ಹರ್ಷ (A.Harsha) ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಅವರಿಗೆ ಜಾಕಿ ಭಾವನಾ (Bhavana) ನಾಯಕಿಯಾಗಿದ್ದಾರೆ.  ಜಯಣ್ಣ-ಭೋಗೇಂದ್ರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್​ ಜನ್ಯಾ (Arjun Janya) ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment