ತನಗಿಂತ 18 ವರ್ಷ ಚಿಕ್ಕವಳಾದ 31ರ ಹರೆಯದ ಯುವತಿಯನ್ನು ಮಾಜಿ ಶಾಸಕ ಮದುವೆಯಾಗಿದ್ದಾರೆ. ಈ ಮದುವೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಟ್ನಾ: ತಮಗಿಂತ 18 ವರ್ಷ ಚಿಕ್ಕವಳಾದ 31ರ ಯುವತಿಯನ್ನು ಮಾಜಿ ಶಾಸಕ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಹಾರದ ಸಮಸ್ತೀಪುರ ಜಿಲ್ಲೆಯ ವಿಭೂತಿಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಯು ನಾಯಕ ರಾಮ್ ಬಾಲಕ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ರಾಮ್ ಬಾಲಕ್ ಸಿಂಗ್ ಅವರನ್ನು ಜೆಡಿಯು ಪಕ್ಷದಿಂದ ಉಚ್ಛಾಟನೆ ಮಾಡಿದ್ದು, ಇದೀಗ ಮದುವೆ ವಿಷಯದಿಂದಾಗಿ ಭಾರೀ ಚರ್ಚೆಯಲ್ಲಿದ್ದಾರೆ.
ಬೆಗೂಸರಾಯ ಜಿಲ್ಲೆಯ ಗಢಪುರ ಭಾಗದ ಗಿರಿಧಾಮದಲ್ಲಿ ಮದುವೆಯಾಗಿದ್ದಾರೆ. ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ಹಲವು ಜನರು ಭಾಗಿಯಾಗಿದ್ದರು. ನವದಂಪತಿಗೆ ಜನರು ಆಶೀರ್ವಾದ ಮಾಡುತ್ತಿದ್ರೆ, ಕೆಲವರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಇಷ್ಟು ಮಾತ್ರವಲ್ಲ ಮಾಜಿ ಶಾಸಕರ ಮದುವೆ ಬಗ್ಗೆ ರಾಜಕೀಯ ವಲಯದಲ್ಲಿಯೂ ಚರ್ಚೆಗಳು ನಡೆಯುತ್ತಿವೆ.
ಬೆಗೂಸರಾಯ, ಸಮಸ್ತೀಪುರ, ಖಗಡಿಯಾ ಮತ್ತು ಪಾಟ್ನಾ ಸೇರಿದಂತೆ ಮಾಜಿ ಶಾಸಕರ ಮದುವೆ ಚರ್ಚೆಯ ವಿಷಯವಾಗಿ ಬದಲಾಗಿದೆ. ರಾಮ್ ಸಿಂಗ್ ಅವರ ವಯುಸ್ಸು 49 ಮತ್ತು ವಧುವಿನ ವಯಸ್ಸು 31 ಆಗಿದ್ದರಿಂದ ಇಬ್ಬರ ನಡುವಿನ ವಯಸ್ಸಿನ ಅಂತರ ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ: ಹರಕಲು-ಮುರುಕು ಸಲೂನ್‌ಗೆ ದೇವರಾಗಿ ಬಂದ ಯುವಕ; ಕಣ್ಣೀರಿಟ್ಟು ಭೂತಾಯಿಗೆ ನಮಸ್ಕರಿಸಿ ಕುಣಿದಾಡಿದ ಕ್ಷೌರಿಕ
ಅಲೌಲಿ ಗ್ರಾಮದ ಸೀತಾರಾಮ್ ಸಿಂಗ್ ಎಂಬವರ ಪುತ್ರಿ ರವೀನಾ ಕುಮಾರಿ ಜೊತೆ ರಾಮ್ ಬಾಲಕ್ ಸಿಂಗ್ ಮದುವೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪತ್ನಿಯನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಶಾಸಕ ಎರಡನೇ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಭೂತಿಪುರ ಕ್ಷೇತ್ರದಿಂದ ಮಾಜಿ ಶಾಸಕ ರಾಮಬಾಲಕ್ ಸಿಂಗ್ ತಮ್ಮ ನೂತನ ಪತ್ನಿ ರವೀನಾ ಕುಮಾರಿಯನ್ನು ಕಣಕ್ಕಿಳಿಸಬಹುದು ಎಂಬುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಮಾಜಿ ಶಾಸಕರು ಆಕ್ಷೇಪಾರ್ಹ ವೀಡಿಯೊ ಮತ್ತು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿ ಸುದ್ದಿಯಲ್ಲಿದ್ದರು.
ಇನ್ನು ಕೆಲ ವರದಿಗಳ ಪ್ರಕಾರ, ವಧುವಿನ ವಯಸ್ಸು 25-26 ಎಂದು ಹೇಳಲಾಗುತ್ತಿದೆ. ರಾಮ್ ಬಾಲಕ್ ಸಿಂಗ್ ವಯಸ್ಸು 60ರ ಆಸುಪಾಸಿನಲ್ಲಿದೆ ಎಂದು ಹೇಳಲಾಗುತ್ತಿದೆ. ಮದುವೆ ದಾಖಲಾತಿ ಪ್ರಕಾರ ಯುವತಿ ವಯಸ್ಸು 31, ರಾಮ್ ಬಾಲಕ್ ಸಿಂಗ್ 49 ವರ್ಷದವರಾಗಿದ್ದಾರೆ. ಮದುವೆಯ ಫೋಟೋ ಮತ್ತು ವಿಡಿಯೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಓ ದೇವ್ರೇ, ಇಂಥಾ ಕಷ್ಟ ಯಾರಿಗೂ ಬೇಡ; ಪಾನಿಪುರಿ ವ್ಯಾಪಾರಿ ಕಷ್ಟಕ್ಕೆ ಮರುಗಿದ ಜನರು