60ನೇ ವಸಂತಕ್ಕೆ ಸೆಂಚುರಿ ಸ್ಟಾರ್: ಹುಟ್ಟುಹಬ್ಬಕ್ಕೆ ಶಿವಣ್ಣನಿಂದ ಸಿಕ್ತಿದೆ ಐದು ಸರ್ಪ್ರೈಸ್!

Jul 11, 2022, 4:26 PM IST

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar)  60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜುಲೈ 12 ಬಂದ್ರೆ ನಾಗವಾರದ ಶಿವರಾಜ್ ಕುಮಾರ್ ಮನೆ ಅಭಿಮಾನಿಗಳ ಜಾತ್ರೆಯಾಗುತ್ತಿತ್ತು. ಆದ್ರೆ ಈ ಭಾರಿ ಅಧ್ಯಾವ ಲಕ್ಷಣಗಳು ಇಲ್ಲ.

ಹ್ಯಾಟ್ರಿಕ್ ಹೀರೋ ಸಧ್ಯ ಭೈರಾಗಿ ಸಿನಿಮಾ ಸಕ್ಸಸ್ನಲ್ಲಿದ್ದಾರೆ. ಆ ಖುಷಿಯನ್ನ  ಪ್ರತಿ ದಿನ ಥಿಯೇಟರ್ಗಳಿಗೆ ಭೇಟಿ ಕೊಟ್ಟು ಫ್ಯಾನ್ಸ್ ಮಧ್ಯೆ ಹಂಚಿಕೊಳ್ಳುತ್ತಿದ್ದಾರೆ. ಜುಲೈ 12ಕ್ಕೆ ಶಿವರಾಜ್ ಕುಮಾರ್ ಜನ್ಮದಿನ. ಆದ್ರೆ ಅಪ್ಪು ಇಲ್ಲ ಅನ್ನೋ ನೋವಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.  ಹಾಗಂತ ಅಭಿಮಾನಿಗಳನ್ನ ನಿರಾಸೆ ಮಾಡುತ್ತಿಲ್ಲ. ಫ್ಯಾನ್ಸ್ಗಾಗಿ ಶಿವಣ್ಣನ ಕಡೆಯಿಂದ ಐದು ಸರ್ಪ್ರೈಸ್ ಸಿದ್ಧವಾಗಿದ್ದು, ತನ್ನ ಮುಂದಿನ ಸಿನಿಮಾಗಳಾದ ವೇದ, ಗೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ, ಕೊಟ್ರೇಶ್ ಡೈರೆಕ್ಷನ್ ಮಾಡುತ್ತಿರೋ ಚಿತ್ರ ಹಾಗೂ ಅಶ್ವತ್ಥಾಮ ಸಿನಿಮಾಗಳ ಟೀಸರ್ ಅಥವ ಫಸ್ಟ್ ಲುಕ್ ಲಾಂಚ್ ಆಗುತ್ತಿವೆ. 

ಶಿವರಾಜ್ ಕುಮಾರ್ 60ನೇ ವಸಂತಕ್ಕೆ ಕಾಲಿಟ್ಟಿರೋದು ಇಡೀ ರಾಜ್ ಕುಟುಂಬಕ್ಕೆ ಮಾತ್ರ ಅಲ್ಲ ಅಣ್ಣಾವ್ರ ಅಭಿಮಾನಿಗಳು ಕನ್ನಡ ಚಿತ್ರರಂಗಕ್ಕೆ ಒಂದು ಸಂಭ್ರಮದ ಗಳಿಗೆ ಆಗಬೇಕಿತ್ತು. ಯಾಕಂದ್ರೆ ಯಾರೇ 60 ವರ್ಷ ಪೂರೈಸಿದ್ರೆ ಶಷ್ಠಿಪೂರ್ತಿ ಅನ್ನೋ ಕಾರ್ಯಕ್ರಮ ಮಾಡ್ತಾರೆ. ಅಪ್ಪು ಇದ್ದಿದ್ರೆ ಶಿವಣ್ಣನಿಗೂ ಶಷ್ಟಿಪೂರ್ತಿ ಮಾಡುತ್ತಿದ್ರು. ಆದ್ರೆ ಇದು ಸಾಧ್ಯವಾಗಿಲ್ಲ. ಹೀಗಾಗಿ ಅಪ್ಪು ಇಲ್ಲ ಅನ್ನೋ ನೋವಿನಲ್ಲಿ ಸೆಂಚುರಿ ಸ್ಟಾರ್ ಈ ಭಾರಿ ಜನ್ಮದಿನವನ್ನ ಕಳೆಯುತ್ತಿದ್ದಾರೆ.