Dhruva Sarja: ಜಿಮ್ ಆರಂಭಿಸಿದ ಅಭಿಮಾನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್!

Jan 2, 2022, 12:55 PM IST

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರಿಗೆ ದೊಡ್ಡ ಅಭಿಮಾನಿ (Fans) ಬಳಗ ಇದೆ. ಅದ್ದೂರಿ, ಬಹದ್ದೂರ್​, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದು, ಸದ್ಯ 'ಮಾರ್ಟಿನ್' (Martin) ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ  ಧ್ರುವ ಸರ್ಜಾ ಈಗ ತಮ್ಮ ಅಪ್ಪಟ ಅಭಿಮಾನಿ ದರ್ಶನ್ (Darshan) ಎಂಬುವರ ಜಿಮ್‌ಗೆ (Gym) ಸಾಥ್ ಕೊಟ್ಟಿದ್ದಾರೆ. ದರ್ಶನ್ ಹೊಸದಾಗಿ ಜಿಮ್ ಆರಂಭಿಸಿದ್ದು, ಈ ಜಿಮ್‌ಗೆ ವಿಶ್ ಮಾಡುವ ಮೂಲಕ ಅಭಿಮಾನಿಗೆ ಆಕ್ಷನ್ ಪ್ರಿನ್ಸ್ ಸಾಥ್ ಕೊಟ್ಟಿದ್ದಾರೆ. 

Dhruva Sarja: ಚೇಸಿಂಗ್ ದೃಶ್ಯದಲ್ಲಿ ಸಖತ್ ಸ್ಟಂಟ್ ಮಾಡಿದ ಆಕ್ಷನ್ ಪ್ರಿನ್ಸ್!

ಈ ಜಿಮ್ ನಾಮಫಲಕದಿಂದ ಹಿಡಿದು ಒಳಗೆ ಗೋಡೆಯ ತುಂಬೆಲ್ಲಾ ಧ್ರುವ ಸರ್ಜಾ ಫೋಟೋ ಹಾಕಲಾಗಿದೆ. ಜೊತೆಗೆ ಧ್ರುವ ಸರ್ಜಾ ಜಿಮ್ ಎಂದೇ ಹೆಸರಿಡಲಾಗಿದೆ. ಚಿರಂಜೀವಿ ಸರ್ಜಾ (Chiranjeevi Sarja) ಫೋಟೋ, ಹೆಸರು ಹಾಕಿ ಸಹೋದರರಿಗೆ ಗೌರವ ಸಲ್ಲಿಸಲಾಗಿದೆ. ಇನ್ನು, 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಅವರು ಜಿಮ್‌ನಲ್ಲಿ ಫುಲ್​ ವರ್ಕೌಟ್ ಕೂಡಾ ಮಾಡುತ್ತಿದ್ದಾರೆ. ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್‌ನ ಈ ಚಿತ್ರದಲ್ಲಿ ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ (Vaibhavi Shandilya) ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment