Actor's Birthday: ಪುನೀತ್ ನಿಧನದಿಂದ ಹುಟ್ಟುಹಬ್ಬಕ್ಕೆ ನೋ ಎಂದ ಶ್ರೀಮುರಳಿ

Dec 18, 2021, 12:28 PM IST

'ಮದಗಜ' (Madagaja) ಸಕ್ಸಸ್ ಖುಷಿಯಲ್ಲಿರುವ ಮುರಳಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ, ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದಿಂದ ಈ ವರ್ಷ ಗ್ರ್ಯಾಂಡ್ ಸೆಲೆಬ್ರೇಷನ್ ಇರಲಿಲ್ಲ. ಬೆಂಗಳೂರಿನಲ್ಲಿ (Bengaluru) ಇರುವುದಿಲ್ಲವೆಂದು ಅಬಿಮಾನಿಗಳಿಗೆ ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್(Sandalwood Roaring Star) ಶ್ರೀ ಮುರಳಿ ಮೊದಲೇ ತಿಳಿಸಿದ್ದರು. ಮದಗಜ ಯಶಸ್ವಿನ ಖುಷಿಯಲ್ಲಿರುವ ಚಿತ್ರತಂಡದ ಜೊತೆ ಮುರಳಿ ಕರ್ನಾಟಕದ ವಿವಿಧೆಡೆ ವಿಸಿಟ್ ಮಾಡುತ್ತಿದ್ದಾರೆ. ಎಲ್ಲೆಡೆ ಸಿನಿ ವೀಕ್ಷಕರಿಂದ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಿಲೀಸ್ ಆದ ವಾರದೊಳಗೆ 25 ಕೋಟಿ ರೂ. ಬಾಚಿ ಕೊಂಡಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಡಬ್ಬಲ್ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಮುರಳಿ ತಮ್ಮ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಂಡರು. ಯಾವ, ಯಾವ ನಟರು ಹೇಗೆ ವಿಶ್ ಮಾಡಿದ್ದಾರೆ. 

ಮೈಸೂರು ಮಂಡ್ಯದಲ್ಲಿ ಮದಗಜ ಶೋ