ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!

ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!

Published : Dec 22, 2025, 04:28 PM IST

ಮಾರ್ಕ್​​ನ ಮಸ್ತ್​ ಮಲೈಕಾ ಹಾಡು ಕನ್ನಡದಲ್ಲಿ ಸಾನ್ವಿಗೆ ಮೊದಲ ಸಾಂಗ್.. ಇದಕ್ಕೂ ಮೊದಲು ತೆಲುಗುನಲ್ಲಿ ನಾನಿ ನಟಿಸಿರೋ 'ಹಿಟ್ 3' ಸಿನಿಮಾದ ಥೀಮ್ ಸಾಂಗ್ ಹಾಡಿದ್ದಾರೆ. ಸಂಗೀತದಲ್ಲಿ ನಿಧಾನಕ್ಕೆ ಮೋಲ್ಡ್ ಆಗುತ್ತಾ ಬಂದಿರೋ ಸಾನ್ವಿ ಇಂದು ಮಾರ್ಕ್​​​​ ಮಸ್ತ್​ ಮಲೈಕಾ ಮೂಲಕ ಟ್ರೆಂಡಿಂಗ್​ನಲ್ಲಿದ್ದಾರೆ.

ಅಪ್ಪ ಅಭಿನಯ ಚಕ್ರವರ್ತಿ.. ಮಗಳು ಗಾಯನ ಚತುರೆ..! ಅಪ್ಪನ ಹೆಸರು ಉಳಿಸಿದ ಮಗಳು ಸಾನ್ವಿ..!
ಅಪ್ಪ ಸೂಪರ್​ ಸ್ಟಾರ್.. ಶ್ರೀಮಂತ ನಟ. ಬೇಕಾಗಿದ್ದೆಲ್ಲಾ ಕಣ್ ಮುಂದೆಯೇ ಇರುತ್ತೆ. ಮನೆ ಫ್ರೆಂಡ್ಸ್​ ಆಂತ ಓಡಾಡ್ಕೊಂಡು ಎಂಜಾಯ್ ಮಾಡ್ಕೊಂಡು ಇರಬಹುದು.. ಆದ್ರೆ ಬಾದ್ ಷಾ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗಲ್ಲ. ಅಪ್ಪನಂತೆ ನನ್ನಲ್ಲಿರೋ ಟ್ಯಾಲೆಂಟ್ ಅನ್ನ ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ಅದಕ್ಕೆ ಏಣಿಯಾಗಿ ನಿಂತ ಸುದೀಪ್​ ಮಗಳ ಕನಸು ನನಸು ಮಾಡಿದ್ದಾರೆ. ಸಂಗೀತ ಲೋಕಕ್ಕೆ ಹೊಸ ಸಿಂಗರ್​ ಅನ್ನ ಪರಿಚಯಿಸಿದ್ದಾರೆ. ಈಗ ಎಲ್ಲೆಲ್ಲೂ ಸಾನ್ವಿ ಸುದೀಪ್​ರ ಕಂಠದ್ದೆ ಗುಣಗಾನ ನಡೀತಿದೆ.

ಹೌದು, ಸಾನ್ವಿ ಸುದೀಪ್ ಕನಸು ನನಸಾಗಿದೆ. ಇಷ್ಟು ದಿನ ಒಂದೊಳ್ಳೆ ಹಾಡಿನ ಮೂಲಕ ಸಂಗೀತ ಸಾಮ್ರಾಜ್ಯದಲ್ಲಿ ಬೆಳಗಬೇಕು. ಹೊಳಿಬೇಕು ಅಂತ ಹಠ ಹೊತ್ತಿದ್ದ ಸಾನ್ವಿ ಮೊದಲ ಹೆಜ್ಜೆಯಲ್ಲೇ ಇಡೀ ಸಂಗೀತ ಲೋಕವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಾರೆ.  ಅದಕ್ಕೆ ಕಾರಣ ಬಾದ್ ಷಾ ಕಿಚ್ಚ ಸುದೀಪ್​​ರ ಮಾರ್ಕ್​ನ  ಮಸ್ತ್​ ಮಲೈಕಾ ಸಾಂಗ್.. ಈ ಹಾಡಿಗೆ ಫಿಮೇಲ್ ವರ್ಷನ್ ಧ್ವನಿ ಕೊಟ್ಟಿರೋದು ಕಿಚ್ಚನ ಮುದ್ದಿನ ಮಗಳು ಸಾನ್ವಿ. ಇದೀಗ ಈ ಸಾಂಗ್ ಟ್ರೆಂಡಿಂಗ್​​​ನಲ್ಲಿ ನಂಬರ್​ ಒನ್ ಸ್ಥಾನಕ್ಕೆ ಬಂದಿದೆ.

ಅಪ್ಪ ಅಭಿನಯ ಚಕ್ರವರ್ತಿ.. ಮಗಳು ಗಾಯನ ಚತುರೆ..!

ಸುದೀಪ್​​ ಸಿನಿಮಾ ರಂಗದಲ್ಲಿ ಅಭಿನಯ ಚಕ್ರವರ್ತಿ.. ಕಿಚ್ಚನ ಮಗಳು ಸಾನ್ವಿ ಸಂಗೀತ ಲೋಕದ ಗಾಯನ ಚತುರೆ. ಸಿನಿಮಾ ಜಗತ್ತಿನ ಪರಿಯಚ ಸಾನ್ವಿಗೆ ಹುಟ್ಟಿನಿಂದಲೇ ಇದೆ. ಆದ್ರೆ ಸಾನ್ವಿ ಸಂಗೀತ ಲೋಕದಲ್ಲಿ ತನ್ನ ಟ್ಯಾಲೆಂಟ್​ ಬೆಳೆಸಿಕೊಂಡಿದ್ದಾರೆ. ಸಾನ್ವಿ ಮ್ಯೂಸಿಕ್​ ಲವರ್​. ಮಗಳ ಮನಸ್ಸನ್ನ ಅರ್ಥ ಮಾಡಿಕೊಂಡ ಕಿಚ್ಚ ಅದೇ ಹಾದಿಯಲ್ಲೇ ಮಗಳನ್ನ ಬಿಟ್ಟಿದ್ದಾರೆ. ಇದೇ ಕಾರಣ ಇವತ್ತು ಒಂದೇ ಒಂದು ಹಾಡಿನಿಂದ ಸಾನ್ವಿ ಟಾಪ್​ ಸಿಂಗರ್​ ಅನ್ನೋ ಹೆಗ್ಗಳಿಕೆ ಪಡೆಯುತ್ತಿದ್ದಾರೆ.

8ನೇ ತರಗತಿ ಓದುವಾಗ್ಲೆ ಸಂಗೀತದ ಮೇಲೆ ಸಾನ್ವಿಗೆ ಆಸಕ್ತಿ..!

ಸಾನ್ವಿಗೆ ಸಿಂಗರ್ ಆಗಬೇಕು ಅನ್ನೋ ಆಸೆ ಚಿಕ್ಕ ವಯಸ್ಸಿನಿಂದಲೇ ಇತ್ತು. ಹೀಗಾಗಿ 8ನೇ ತರಗತಿ ಓದುವಾಗ ಶಾಲೆಯಲ್ಲಿ ಹಾಡಿನ ಕಾಂಪಿಟೇಷನ್​​ನಲ್ಲಿ ಭಾಗಿ ಆಗಿದ್ದ ಸಾನ್ವಿ ಅಂದೇ ಅಪ್ಪನಿಗೆ ತನ್ನ ಸಿಂಗಿಂಗ್ ಪ್ರತಿಭೆ ತೋರಿಸಿ ಬೆನ್ನು ತಟ್ಟಿಸಿಕೊಂಡಿದ್ರು. ಅಂದಿನಿಂದ ಸಂಗೀತ ಲೋಕದ ಜ್ನಾನ ಬೆಳೆಸಿಕೊಳ್ಳೋಕೆ ಶುರು ಮಾಡಿದ್ದ ಸಾನ್ವಿ ಇಂದು ಸಿಂಗರ್​ ಅಂತ ಪ್ರ್ಯೂ  ಮಾಡಿದ್ದಾರೆ.

ಸಾನ್ವಿಯ ಸಿಂಗಿಂಗ್ ಟ್ಯಾಲೆಂಟ್​ ಎಂಥಾದ್ದು ಗೊತ್ತಾ.? ಇಂಗ್ಲೀಷ್​ ಹಾಡುಗಳನ್ನ ಅದ್ಭುತವಾಗಿ ಹಾಡಿ ಸೈ ಎನಿಸಿಕೊಂಡವರು. ಮ್ಯಾಕ್ಸ್​ ಸಿನಿಮಾದ ದೃಶ್ಯದಲ್ಲಿ ಬರೋ ಬ್ರ್ಯಾಕ್​ಗ್ರೌಂಡ್​​ ಮ್ಯೂಸಿಕ್​ಗೆ ಇಂಗ್ಲೀಷ್​​ನಲ್ಲಿ ತನ್ನ ಧ್ವನಿ ಕೊಟ್ಟಿದ್ರು. ಅಷ್ಟೆ ಅಲ್ಲ ಕಿಚ್ಚನ ಅಕ್ಕನ ಮಗ ಸಂಚಿತ್​ರ ಜಿಮ್ಮಿ ಸಿನಿಮಾದ ಕ್ಯಾರೆಕ್ಟರ್ ಟೀಸರ್​​ಗೆ ಸಾನ್ವಿವೇ ಸಿಂಗರ್​..


ಕಿಚ್ಚನ  ಸೂಪರ್ ಹಿಟ್ ಸಾಂಗ್ ರಾ ರಾ ರಕ್ಕಮ್ಮ ಮೈನಸ್​ ಟ್ರ್ಯಾಕ್ ಸಾಂಗ್ ಹಾಡಿದ್ದು ಸಾನ್ವಿ. ಅಷ್ಟೆ ಅಲ್ಲ ಸರಿ ಗಮ ಪಾ ವೇಧಿಕೆ ಮೇಲೆ ಸಾನ್ವಿ ಅಪ್ಪನಿಗೆ ಹಾಡು ಹಾಡಿ ರಂಜಿಸಿದ್ರು.

ಮಾರ್ಕ್​​ನ ಮಸ್ತ್​ ಮಲೈಕಾ ಹಾಡು ಕನ್ನಡದಲ್ಲಿ ಸಾನ್ವಿಗೆ ಮೊದಲ ಸಾಂಗ್.. ಇದಕ್ಕೂ ಮೊದಲು ತೆಲುಗುನಲ್ಲಿ ನಾನಿ ನಟಿಸಿರೋ 'ಹಿಟ್ 3' ಸಿನಿಮಾದ ಥೀಮ್ ಸಾಂಗ್ ಹಾಡಿದ್ದಾರೆ.  ಹೀಗೆ ಸಂಗೀತದಲ್ಲಿ ನಿಧಾನಕ್ಕೆ ಮೋಲ್ಡ್ ಆಗುತ್ತಾ ಬಂದಿರೋ ಸಾನ್ವಿ ಇಂದು ಮಾರ್ಕ್​​​​ ಮಸ್ತ್​ ಮಲೈಕಾಗೆ ಮಸ್ತ್​​ಧ್ವನಿ ಕೊಟ್ಟು ಟ್ರೆಂಡಿಂಗ್​ನಲ್ಲಿದ್ದಾರೆ.

05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
Read more