KGF Chapter 2: ಪ್ರಶಾಂತ್ ನೀಲ್ ಪ್ರಯೋಗಕ್ಕೆ ವಿಶ್ವ ಸಿನಿಮೋದ್ಯಮವೇ ಫಿದಾ!

Apr 16, 2022, 4:14 PM IST

4 ವರ್ಷಗಳ ಹಿಂದೆ. ಅಂದರೆ 2018ರ ಡಿಸೆಂಬರ್ 21ರಂದು ರಿಲೀಸ್ ಆಗಿದ್ದ 'ಕೆಜಿಎಫ್ ಚಾಪ್ಟರ್ 1' (KGF) ಮೇಲೆ, ಜನ ಯಾವ ನಿರೀಕ್ಷೆಗಳನ್ನೂ ಇಟ್ಕೊಂಡಿರ್ಲಿಲ್ಲ. ಹಾಗಾಗಿನೇ ಅಂದಿನ ಆ ಆರ್ಭಟ, ಆ ಅಬ್ಬರ ಜನಕ್ಕೆ ಅಚ್ಚು ಮೆಚ್ಚಾಗಿತ್ತು. ಆದರೆ ಚಾಪ್ಟರ್ 2 ಹಾಗಲ್ಲ. ಈ ಸಿನಿಮಾ ಮೇಲೆ ಬರೀ ನಾವಷ್ಟೇ ಅಲ್ಲ, ನಮ್ಮ ಅಕ್ಕಪಕ್ಕದ ರಾಜ್ಯದವರೂ ಅದಕ್ಕಿಂತಾ ಮುಖ್ಯವಾಗಿ, ಬಾಲಿವುಡ್ (Bollywood) ಮಂದಿ ನಿರೀಕ್ಷೆ ಇಟ್ಕೊಂಡಿದ್ದಾರೆ. ಈ ಸಿನಿಮಾದ ಒಂದು ಸೀಕ್ರೆಟ್ ಏನು ಅಂದ್ರೆ, ಯಾವ ಸಿನಿಮಾ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸುತ್ತೋ, ಅಂಥಾ ಸಿನಿಮಾ ಸದ್ದೇ ಇಲ್ಲದೆ ಸೈಡಿಗೆ ಹೋಗ್ಬಿಡುತ್ತೆ. ಅಂತ ಎಷ್ಟೋ ಉದಾಹರಣೆಗಳು ಕಣ್ಮುಂದೆ ಇದಾವೆ. 

ಬಾಕ್ಸಾಫೀಸ್ ಮೂನ್ ಸ್ಟಾರ್ ಯಶ್, ಮೊದಲ ದಿನದ KGF 2 ಗಳಿಕೆ ಎಷ್ಟು ಗೊತ್ತಾ.?

ಆದರೆ ಜನ ಕೆಜಿಎಫ್ ಮೇಲೆ ಏನೇನು ನಿರೀಕ್ಷೆ ಇಟ್ಕೊಂಡಿದ್ರೋ, ಆ ನಿರೀಕ್ಷೆಗಳನ್ನೂ ಮೀರಿ ಸಿನಿಮಾ ಮೂಡಿಬಂದಿದೆ. ನೀವು ಎಷ್ಟೇ ಎಕ್ಸ್ಪೆಕ್ಟೇಷನ್ ಇಟ್ಕೊಂಡ್ರು, ಅದರ ಡಬಲ್ ರಿಟರ್ನ್ ನಿಮಗೆ ಸಿಗೋದಂತೂ ಪಕ್ಕಾ. ಇದು ಅಭಿಮಾನಿಗಳು ಹೇಳ್ತಾ ಇರೋ ಮಾತು. ದೇಶದ ಸಿನಿಮಾ ಹಿಸ್ಟರಿಯಲ್ಲೇ ಇಲ್ಲೀ ತನಕ ಯಾವ ಸಿನಿಮಾನೂ ಮಾಡಿರದ ಸಾಧನೆಯನ್ನ 'ಕೆಜಿಎಫ್ ಚಾಪ್ಟರ್ 2' (KGF Chapter 2) ಮಾಡಿದೆ. ಈ ಹಿಂದೆ 'ಬಾಹುಬಲಿ ದಿ ಕನ್ಕ್ಲೂಷನ್' ಮಾಡಿದ ಸಾಧನೆಯನ್ನೇ ನೋಡಿ, ಇದು ಯಾರೂ ಮುರಿಯಲಾಗದ ಸಾಧನೆ ಅಂತ ಮಾತಾಡಿದರು. ಅದಾದ್ಮೇಲೆ, ಅದೇ ಸಿನಿಮಾದ ನಿರ್ದೇಶದ, ಜಕಣ, ರಾಜಮೌಳಿ ಅವರ 'ಆರ್‌ಆರ್‌ಆರ್' ಬಾಹುಬಲಿ ದಾಖಲೆಯನ್ನ ಸೈಡಿಗೆ ತಳ್ಳಿತ್ತು. ಈಗ ಆ ದಾಖಲೆಗಳನ್ನೆಲ್ಲಾ ಬಲಿ ಹಾಕೋದಕ್ಕೆ ರಾಕಿ ಎಂಟ್ರಿ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies