
ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿ ಮತ್ತು ಕೃಷ್ಣಮೃಗ... ಈ ಮೂರು ಶಬ್ದಗಳು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಆರಾಧ್ಯ ದೈವ ಕೃಷ್ಣಮೃಗವನ್ನು ಕೊಂದಿದ್ದಾರೆ ಎನ್ನುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಆರೋಪ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಹಲವು ಬಾರಿ ಬೆದರಿಕೆ ಹಾಕಿದ್ದಾಗಿದೆ. ಅವರ ನಿಕಟವರ್ತಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಯೂ ಮಾಡಿಯಾಗಿದೆ. ಇಷ್ಟೆಲ್ಲಾ ಆದ ಮೇಲೆ ನಟ ಒಂದು ಕ್ಷಮೆ ಕೋರಬಾರದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಹಿಂದೂ ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎನ್ನುವ ಗ್ಯಾಂಗ್ಸ್ಟರ್ಸ್ ಮಾತನ್ನು ಒಪ್ಪಲು ಸಲ್ಮಾನ್ ಆಗಲೀ ಅವರ ಅಪ್ಪ ಸಲೀಂ ಖಾನ್ ಆಗಲಿ ರೆಡಿ ಇಲ್ಲ.
ಇದರ ನಡುವೆಯೇ, ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಜೈಲಿನಿಂದ ಹೊರಕ್ಕೆ ಬರುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಜೈಲು ಎನ್ನುವುದು ಸರಿಯಾಗಿ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಸಲ್ಮಾನ್ ಖಾನ್, ಜೈಲಿನಲ್ಲಿ ಇರುವ ಲಾರೆನ್ಸ್ ಬಿಷ್ಣೋಯಿಯನ್ನು ಭೇಟಿಯಾಗಿ ಕ್ಷಮೆ ಕೋರಿ ವಾಪಸ್ ಬರುತ್ತಿದ್ದಾರೆ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ಹಲವರು ರೀ ಶೇರ್ ಮಾಡಿಕೊಂಡಿದ್ದು, ಕೊನೆಗೂ ಸಲ್ಲು ಭಾಯಿಗೆ ಬುದ್ಧಿ ಬಂತು, ಅಷ್ಟೇ ಸಾಕು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಜೈ ಲಾರೆನ್ಸ್ ಬಿಷ್ಣೋಯಿ ಎನ್ನುತ್ತಿದ್ದರೆ, ಕ್ಷಮೆಯೇ ಕೇಳಲ್ಲ ಎಂದಿದ್ದ ಸಲ್ಮಾನ್ ಜೀವ ಬೆದರಿಕೆಗೆ ಕೊನೆಗೂ ಸೋಲನ್ನು ಒಪ್ಪಿಕೊಂಡ್ರಾ ಎನ್ನುತ್ತಿದ್ದಾರೆ.
ಪ್ರಥಮಾ ನಿಂಗೆ ಬುದ್ಧಿ ಇಲ್ವೆನೊ... ಬೇಲ್ ಕ್ಯಾನ್ಸಲ್ ಮಾಡ್ಸಿಲ್ಲಾ ಅಂದ್ರೆ ನನ್ ಹೆಸ್ರು.... ಜಗದೀಶ್ ಗುಡುಗು
ಸೋಷಿಯಲ್ ಮೀಡಿಯಾದಲ್ಲಿ ಕೆಲವರು, ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯಿಯನ್ನು ಮೀಟ್ ಮಾಡಲು ಜೈಲಿಗೆ ತಲುಪಿದ್ದಾರೆ ಮತ್ತು ಅವರ ಅಂಗರಕ್ಷಕ ಶೇರಾ ಬೇರೆ ಯಾರಾದರೂ ಇದನ್ನು ನೋಡುತ್ತಿದ್ದಾರೆಯೇ ಎಂದು ಪದೇ ಪದೇ ತಿರುಗಿ ಗಮನಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ. ಆದರೆ ಇದರ ಅಸಲಿಯತ್ತೇ ಬೇರೆ ಇದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಕಾಣಿಸುವಂತೆ, ಸಲ್ಮಾನ್ ಖಾನ್ ಜೈಲಿನಿಂದ ಹೊರಕ್ಕೆ ಬರುತ್ತಿರುವುದು ನಿಜವೇ. ಆದರೆ ಅವರು ಹೋಗಿದ್ದು ಲಾರೆನ್ಸ್ ಬಿಷ್ಣೋಯಿಯನ್ನು ಮೀಟ್ ಮಾಡಲು ಅಲ್ಲ, ಬದಲಿಗೆ ಅದೇ ಕೇಸ್ನಲ್ಲಿ ಅಂದ್ರೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಸಂದರ್ಭದಲ್ಲಿ, ಜೈಲಿನಿಂದ ಹೊರಕ್ಕೆ ಬರುತ್ತಿರುವ ವಿಡಿಯೋ ಇದಾಗಿದೆ. ಜೋಧ್‌ಪುರ ಸೆಂಟ್ರಲ್ ಜೈಲಿನಲ್ಲಿದ್ದ ಸಲ್ಮಾನ್ ಖಾನ್ 2018 ರಲ್ಲಿ ರಿಲೀಸ್ ಆಗಿದ್ದರು. ಅದರ ವಿಡಿಯೋ ಈಗ ಶೇರ್ ಮಾಡಲಾಗುತ್ತಿದೆ.
ಆದರೆ, ಜೈಲನ್ನು ನೋಡಿದವರು ಬೇರೆಯದ್ದೇ ಅರ್ಥ ಕಲ್ಪಿಸಿಕೊಂಡು ಅದನ್ನೇ ಸತ್ಯ ಎಂದು ಹೇಳುತ್ತಿದ್ದಾರೆ. ಸದ್ಯ ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಆದರೆ ಈಗ ಶೇರ್ ಆಗ್ತಿರೋ ವಿಡಿಯೋ, ಜೋಧ್‌ಪುರ ಜೈಲಿನದ್ದಾಗಿದೆ. ಆದ್ದರಿಂದ ಸಲ್ಮಾನ್ ಖಾನ್, ಸದ್ಯ ಲಾರೆನ್ಸ್ ಬಿಷ್ಣೋಯಿಗೆ ಕ್ಷಮೆ ಕೋರಿಲ್ಲ. ದೇವಸ್ಥಾನಕ್ಕೆ ಬಂದು ಕ್ಷಮೆ ಕೋರಿದ್ರೆ ನಾವು ಬೆದರಿಕೆ ಹಾಕಲ್ಲ, ನಮಗೆ ಬೇಕಿರುವುದು ನಿನ್ನ ಕ್ಷಮೆಯಷ್ಟೇ. ನಮ್ಮ ದೇವರನ್ನು ಕೊಂದಿರುವ ನೀನು ಕ್ಷಮೆ ಕೋರುವುದು ನಮ್ಮ ಬಯಕೆ ಎಂದು ಲಾರೆನ್ಸ್ ಬಿಷ್ಣೋಯಿ ಇದಾಗಲೇ ಹಲವಾರು ಬಾರಿ ಸಲ್ಮಾನ್ಗೆ ಹೇಳಿದ್ದಾನೆ. ಆದರೆ ನಾವು ತಪ್ಪೇ ಮಾಡಿಲ್ಲ, ಕ್ಷಮೆಯ ಪ್ರಶ್ನೆಯೇ ಇಲ್ಲ ಎಂದು ಸಲ್ಮಾನ್ ಮತ್ತು ತಂದೆ ಸಲೀಂ ಖಾನ್ ಹೇಳುತ್ತಾ ಬಂದಿದ್ದಾರೆ.
ದೂರು ಕೊಟ್ರೆ ನಮ್ ವ್ಯಾಪ್ತಿಗೆ ಬರಲ್ಲ ಎಂದ ಲೇಡಿ ಪೊಲೀಸ್ಗೆ ಕಪಾಳಮೋಕ್ಷ ಮಾಡಿದ ಯುವಕ! ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.