ಮಗುವನ್ನು ಎತ್ತಿಕೊಂಡಾಗ ಅಣ್ಣ ಜೊತೆಗಿದ್ದ ಹಾಗೆಯೇ ಫೀಲ್ ಆಯ್ತು: ಧ್ರುವಾ ಸರ್ಜಾ

Oct 22, 2020, 3:38 PM IST

ಬೆಂಗಳೂರು (ಅ. 22): ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷವನ್ನು ಧ್ರುವಾ ಸರ್ಜಾ ಹಂಚಿಕೊಂಡಿದ್ದಾರೆ. 'ಅಣ್ಣ, ಅತ್ತಿಗೆಗೆ ಗಂಡು ಮಗುವಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಕೇಳಿಕೊಂಡರು. ಧ್ರುವ ತುಂಬಾ ಖುಷಿಯಲ್ಲಿದ್ದರು.

ಗಂಡು ಮಗುವಿಗೆ ಜನ್ಮ ಕೊಟ್ಟ ಮೇಘನಾ ರಾಜ್! 

'ಮಗುವನ್ನು ಎತ್ತಿಕೊಂಡಾಗ ಅಣ್ಣನನ್ನೇ ನೆನಪು ಬಹಳ ಬಂತು. ಅಣ್ಣನೇ ಜೊತೆಗಿದ್ದ ಹಾಗೆ ಅನಿಸಿತು. ಅವನಿಗೆ ಯಾವಾಗಲೂ ರೇಗಿಸ್ತಿದ್ದೆ. ಅವೆಲ್ಲಾ ನೆನಪಾಯ್ತು' ಎಂದರು.