ಸಿದ್ಧರಾಮಯ್ಯ ಅವರನ್ನು ತಂದೆಯ ಸ್ಥಾನದಲ್ಲಿ ನೋಡ್ತೀನಿ: ಲಾವಣ್ಯ ಬಲ್ಲಾಳ್‌

Jan 17, 2023, 7:50 PM IST

ಬೆಂಗಳೂರು (ಜ.17): ನಾ ನಾಯಕಿ ಸಮಾವೇಶದಲ್ಲಿ ಸಿದ್ಧರಾಮಯ್ಯ ನಿರೂಪಕಿಯನ್ನು ದಿಟ್ಟಿಸಿ ನೋಡಿದ ವಿಡಿಯೋ ವೈರಲ್‌ ಆಗಿದೆ. ಈ ವೈರಲ್‌ ವಿಡಿಯೋದಲ್ಲಿದ್ದ ನಿರೂಪಕಿ ಕಾಂಗ್ರೆಸ್‌ ವಕ್ತಾರೆ ಮಂಗಳೂರು ಮೂಲದ ಲಾವಣ್ಯ ಬಲ್ಲಾಳ್‌ ಎನ್ನುವ ಮಾಹಿತಿ ಕೂಡ ಗೊತ್ತಾಗಿದೆ. ಇದರ ನಡುವೆ ಸ್ವತಃ ಲಾವಣ್ಯ ಬಲ್ಲಾಳ್‌ ಈ ಬಗ್ಗೆ ಮಾತನಾಡಿದ್ದು, ವಿಡಿಯೋ ನೋಡ್ತಿದ್ದ ಹಾಗೆ ಬಹಳ ತಮಾಷೆ ಎನಿಸಿತು ಎಂದು ಹೇಳಿದ್ದಾರೆ.

ನನಗೆ ಆ ವಿಡಿಯೋ ನೋಡ್ತಿದ್ದ ಹಾಗೇ ಕ್ಯೂಟ್ ಅನಿಸ್ತು, ತುಂಬಾ ನಕ್ಕುಬಿಟ್ಟೆ ಈ ವೀಡಿಯೋ ನೋಡ್ತಿದ್ದ ಹಾಗೆ. ಇದು ಒಳ್ಳೆಯ ಪಾಸಿಟಿವ್ ಟ್ರೋಲ್ ಅಗಿದೆ ಅನ್ನಿಸ್ತು. ವೈರಲ್ ಆಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ, ನಾನು ಸಿದ್ದರಾಮಯ್ಯನವರನ್ನ ತಂದೆ ಸ್ಥಾನದಲ್ಲಿ ನೋಡ್ತೀನಿ ಎಂದು ಹೇಳಿದ್ದಾರೆ.

ಟಗರು ಕಣ್ಣೋಟಕ್ಕೆ ಸಿಕ್ಕಿದ ಕಾಂಗ್ರೆಸ್‌ ನಾಯಕಿ ಲಾವಣ್ಯ ಬಲ್ಲಾಳ್‌, ಆರ್‌ಜೆಯಿಂದ ರಾಜಕೀಯದವರೆಗಿನ ಹಾದಿ..!

ದಕ್ಷಿಣ ಭಾರತದ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ವಿಭಾಗವನ್ನು ಹೆಚ್ಚಾಗಿ ನೋಡ್ತೇನೆ. ಭಾರತ್‌ ಜೋಡೋ ಯಾತ್ರೆಯಲ್ಲಿ ನನಗೆ ಕೇರಳ ರಾಜ್ಯದ ಜವಾಬ್ದಾರಿ ನೀಡಿದ್ದರು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇಲ್ಲಿಯವರೆಗೂ ಲಾವಣ್ಯ ಬಗ್ಗೆ ಪಕ್ಷದವರಿಗೆ ಗೊತ್ತಿತ್ತು. ಈ ವಿಡಿಯೋ ಮೂಲಕ ಎಲ್ಲರಿಗೂ ಗೊತ್ತಾಗಿದೆ ಎಂದಿದ್ದಾರೆ.