ಸಿದ್ದು - ಬಿಎಸ್‌ವೈ ನಡುವೆ ಪಟ್ಟಕ್ಕಾಗಿ ಕಿತ್ತಾಟ; ಉಪ ಚುನಾವಣೆ ಫಲಿತಾಂಶದ ನಂತರ ಸಿಎಂ ಬದಲು?

Nov 6, 2020, 11:36 AM IST

ಬೆಂಗಳೂರು (ನ. 06): ನನಗೆ ದೆಹಲಿಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಹೇಳುವುದಾದರೆ ಉಪ ಚುನಾವಣೆ ಫಲಿತಾಂಶದ ಬಳಿಕ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವುದು ರಾಜಕೀಯ ಸಂಚಲನವನ್ನುಂಟು ಮಾಡಿದೆ. 

ಅಮೆರಿಕಾ ಚುನಾವಣೆ 2020: ಬೈಡೆನ್ ಆರ್ಭಟದ ಮುಂದೆ ಟ್ರಂಪ್ ಧೂಳಿಪಟ?

ಉಪ ಚುನಾವಣೆ ಫಲಿತಾಂಶದ ಬಳಿಕ ಸಾಕಷ್ಟು ಬದಲಾವಣೆ ಆಗಲಿದೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುತ್ತದೆ. ಇದಕ್ಕೆ ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೂ ಕಾರಣ ಇರಬಹುದು. ಆದರೆ ಹಲವು ದಿನಗಳಿಂದ ಸಿಎಂ ಬದಲಾಯಿಸುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯನವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ' ಎಂದು ಗರಂ ಆಗಿದ್ದಾರೆ.