ಸೀರೆಯಲ್ಲೂ ಸಖತ್ ಹಾಟ್ ಚಂದನವನದ ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು

First Published | Oct 22, 2024, 6:10 PM IST

ಸ್ಯಾಂಡಲ್ ವುಡ್ ಸಿಕ್ಸ್ ಪ್ಯಾಕ್ ಸುಂದರಿ ನಿಶ್ವಿಕಾ ನಾಯ್ಡು ತಮ್ಮ ಹೊಸ ಫೋಟೊ ಶೂಟ್ ಮೂಲಕ ಸಖತ್ ಸದ್ದು ಮಾಡ್ತಿದ್ದಾರೆ. 
 

ಅಮ್ಮ ಐ ಲವ್ ಯೂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾಗೆ (Chiranjeevi Sarja) ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸುಂದರಿ ನಿಶ್ವಿಕಾ ನಾಯ್ಡು ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಫೇವರಿಟ್ ನಟಿಯಾದರು. 
 

ವಾಸು ನಾನು ಪಕ್ಕಾ ಕಮರ್ಶಿಯಲ್, ಪಡ್ಡೆ ಹುಲಿ, ರಾಮಾರ್ಜುನ, ಸಖತ್, ಜೆಂಟಲ್ ಮ್ಯಾನ್, ಗುರು ಶಿಷ್ಯರು, ದಿಲ್ ಪಸಂದ್, ಕರಟಕ ದಮನಕ ಸಿನಿಮಾಗಳಲ್ಲಿ ನಿಶ್ವಿಕಾ (Nishvika Naidu)  ನಟಿಸಿದ್ದರು. ತಮ್ಮ ಸೌಂದರ್ಯದ ಜೊತೆಗೆ ಅಭಿನಯದ ಮೂಲಕ ನಟಿ ಗಮನ ಸೆಳೆದಿದ್ದರು. 
 

Tap to resize

ಅಷ್ಟೇ ಅಲ್ಲ ನಟಿ ಕೆಲವು ಸಿನಿಮಾಗಳಲ್ಲಿ ಹಾಡುಗಳಲ್ಲಿ ಸ್ಪೆಷಲ್ ಎಪಿಯರೆನ್ಸ್ ಕೊಡುವ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನೂ ಸಹ ಕೆಡಿಸಿದ್ದರು.  ಗರಡಿ ಸಿನಿಮಾದ ಹೊಡಿರಲಿ ಹಲಗಿ ಹೊಡಿರಲಿ ಹಲಗಿ ಎನ್ನುವ ಹಾಡಿಗೆ ತಾವು ಹೆಜ್ಜೆ ಹಾಕೋದಲ್ಲದೇ ಹುಡುಗರು ಸಹ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. 
 

ನಂತರ ಕರಟಕ ದಮನಕ ಸಿನಿಮಾದಲ್ಲೂ ಪ್ರಭುದೇವ ಜೊತೆ ಹಿತಲಕ ಕರಿಬೇಡ ಮಾವ ಹಾಡು ಕೂಡ ತುಂಬಾನೆ ಜನಪ್ರಿಯತೆ ಪಡೆದಿತ್ತು, ಈ ಹಾಡಿಗೆ ಇವತ್ತಿಗೂ ಹುಡುಗೀರು ರೀಲ್ಸ್ ಮಾಡಿ ಹೆಜ್ಜೆ ಹಾಕುತ್ತಿದ್ದಾರೆ. 
 

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ನಟಿ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದರು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಹಾನಟಿ ರಿಯಾಲಿಟಿ ಶೋಗೆ (reality show) ತೀರ್ಪುಗಾರರಾಗಿದ್ದರು ನಿಶ್ವಿಕಾ ನಾಯ್ದು. ಸದ್ಯ ಸಿನಿಮಾಗಳಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ ನಟಿ. 
 

ನಿಶ್ವಿಕಾ ನಾಯ್ಡು ತಮ್ಮ ಅಭಿನಯದ ಜೊತೆಗೆ ತಮ್ಮ ಫಿಟ್ನೆಸ್ (fitness) ನಿಂದಾಗಿಯೂ ತುಂಬಾನೆ ಜನಪ್ರಿಯತೆ ಪಡೆದಿದ್ದರು. ತಮ್ಮ ಫಿಟ್ನೆಸ್ ಬಗ್ಗೆ ರಾಜಿಮಾಡಿಕೊಳ್ಳದ ನಟಿ ಪ್ರತಿದಿನ ಜಿಮ್, ವರ್ಕ್ ಔಟ್ ಮಾಡುತ್ತಿದ್ದು, ಮಸಲ್ಸ್ ಬಿಲ್ಡ್ ಮಾಡಿದ್ದು, ಸ್ಯಾಂಡಲ್ ವುಡ್’ನ ಸಿಕ್ಸ್ ಪ್ಯಾಕ್ ಸುಂದರಿ ಅಂತಾನೆ ಜನಪ್ರಿಯತೆ ಪಡೆದಿದ್ದಾರೆ. 
 

ಇದೀಗ ನಿಶ್ವಿಕಾ ನಾಯ್ಡು ಸೀರೆಯುಟ್ಟಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ. ನಟಿ ಕಪ್ಪು ಬಣ್ಣದ ಸೀರೆಯುಟ್ಟಿದ್ದು, ಅದಕ್ಕೆ ಡಿಸೈನರ್ ಕಪ್ಪು ಬ್ಲೌಸ್ ಧರಿಸಿದ್ದಾರೆ. ಸೀರೆಯಲ್ಲೂ ನಟಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಸಿಕ್ಸ್ ಪ್ಯಾಕ್ ಹೀರೋಯಿನ್ (six pack heroine), ಕಿಲ್ಲಿಂಗ್ ಲುಕ್ ಎಂದು ಕಾಮೆಂಟ್ ಮಾಡಿದ್ದಾರೆ. 
 

Latest Videos

click me!