ಪಾಕ್‌ ಪರ ಘೋಷಣೆ ಆಯ್ತು, ಮತ್ತೊಂದು ವಿವಾದದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್!

Mar 6, 2024, 11:07 AM IST

ಬೆಂಗಳೂರು (ಮಾ.06): ಇನ್ನೂ ಪಾಕ್‌ ಪರ ಘೋಷಣೆ ಪ್ರಕರಣ ಹಸಿಹಸಿಯಾಗಿರುವಾಗಲೇ ಸಂಸದ ನಾಸಿರ್ ಹುಸೇನ್‌ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹೌದು! ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಜೊತೆಗೆ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಇಸ್ತಿಯಾಕ್ ಪೈಲ್ವಾನ್ ಅಹ್ಮದ್ ಇರುವ ಫೋಟೋ ವೈರಲ್​ ಆಗಿದೆ. ಫೋಟೋದಲ್ಲಿ ರೌಡಿಶೀಟರ್​ ಇಸ್ತಿಯಾಕ್​ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರಿ​​ಗೆ ಹೂಗುಚ್ಛ ನೀಡಿ ಶುಭ ಕೋರುತ್ತಿದ್ದಾರೆ. ಇನ್ನು ರೌಡಿಶೀಟರ್​ ಇಸ್ತಿಯಾಕ್ 1993ರಂದಲೂ ಆಕ್ಟೀವ್ ಆಗಿದ್ದು, ಈತನ ವಿರುದ್ಧ ಸಾಲು ಸಾಲು ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿವೆ. 

ಜೊತೆಗೆ ಬೆಂಗಳೂರಿನಲ್ಲೇ ಇಸ್ತಿಯಾಕ್ ಮೇಲೆ ೪೮ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳಿವೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ನಿಂದ 2 ಕೋಟಿ ಪಡೆದ ಆರೋಪವಿದ್ದು, ಈ ಹಿನ್ನಲೆ ಅಂದಿನ ಎಸ್ ಐಟಿ ಟೀಮ್ ಇಸ್ತಿಯಾಕ್ ಬಂಧಿಸಿತ್ತು. 2019 ರ ಜುಲೈ 30 ರಂದು ಇಸ್ತಿಯಾಕ್ ಬಂಧನವಾಗಿತ್ತು. ಶಿವಾಜಿನಗರ ಮಾಜಿ ಕಾರ್ಪೋರೇಟರ್ ಫರೀದಾ ಪತಿ ಇಸ್ತಿಯಾಕ್ ಅಹ್ಮದ್. 2019 ರಲ್ಲಿ  ಕಾಂಗ್ರೆಸ್ ಕಚೇರಿಯಲ್ಲೂ ಇಸ್ತಿಯಾಕ್ ಅಹ್ಮದ್ ಕಾಣಿಸಿಕೊಂಡಿದ್ದ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೂಡ ಭೇಟಿಯಾಗಿದ್ದ. ಈ ವೇಳೆ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ 2023 ರಲ್ಲಿ ಹಾಲಿ ಶಿವಾಜಿನಗರ ಶಾಸಕ ರಿಸ್ವಾನ್ ಹರ್ಷದ್ ಜೊತೆ ಕೂಡ ಕಾಣಿಸಿಕೊಂಡಿದ್ದ. ಈ ಹಿಂದೆ ಶಾಸಕ ರಿಸ್ವಾನ್ ಹರ್ಷದ್ ಗೆ ಇಸ್ತಿಯಾಕ್ ಸಿಹಿ ತಿನ್ನಿಸೋ ಪೋಟೋ ವೈರಲ್ ಆಗಿತ್ತು.