ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಆಗಸ್ಟ್‌ನಲ್ಲಿ ಸಂಪುಟ ವಿಸ್ತರಣೆ? ಯಾರ್ಯಾರಿಗೆ ಅವಕಾಶ?

Jul 26, 2022, 11:29 AM IST

ಬೆಂಗಳೂರು, (ಜುಲೈ.26): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ನಿನ್ನೆ (ಸೋಮವಾರ) ಅಷ್ಟೇ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರನ್ನ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ವಿವಿಧ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ, ಪಕ್ಷ ನಿಷ್ಠರಿಗೆ ಅವಕಾಶ

ಇದರ ಮಧ್ಯೆ ಇದೀಗ ಸಂಪುಟ ವಿಸ್ತರಣೆ ಚರ್ಚೆ ಮುನ್ನಲೆ ಬಂದಿದೆ. ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಸಂಪುಟ ಪುನಾರಚನೆ ಆಗುತ್ತೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಒಂದು ವರ್ಷದ ಬಳಿಕ ಇದೀಗ ಮತ್ತೆ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿವೆ.  ಆಗಸ್ಟ್‌ನಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಯಾರ್ಯಾರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಇಲ್ಲಿದೆ.