Apr 28, 2023, 11:40 AM IST
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ರಾಜಕಾರಣಿಗಳು ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಒಬ್ಬರದ್ದು 150 ಸೀಟುಗಳ ಶಪಥವಾದರೆ, ಮತ್ತೊಬ್ಬರದ್ದು 130 ಸೀಟುಗಳ ಪ್ರತಿಜ್ಞೆ, ಇವೆಲ್ಲದರ ಮಧ್ಯೆ ಈಗ ಶವಪೆಟ್ಟಿಗೆ ಕಥೆ. ಈ ಕಥೆ ನಡೆಯುತ್ತಿರುವುದು ಕರ್ನಾಟಕ ಕುರುಕ್ಷೇತ್ರದಲ್ಲಿ, ರಕ್ತದಲ್ಲಿ ಬರೆದುಕೊಡ್ತೇನೆ ,ರಕ್ತದಲ್ಲಿ ಬರೆದುಕೊಡ್ತೇನೆ ... ಎಲ್ಲರ ಬಾಯಲ್ಲಿ ಇದೊಂದೆ ಮಾತು. ರಾಜ್ಯ ಕಂಡ ಮುತ್ಸದ್ಧಿ ನಾಯಕ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಹುದ್ದೆಯಂಥಾ ಜವಾಬ್ದಾರಿ ಸ್ಥಾನದಲ್ಲಿರುವ ಡಿಕೆ ಶಿವಕುಮಾರ್ ಈ ರಕ್ತಪ್ರತಿಜ್ಞೆಯ ಮಾಡಿದ್ದಾರೆ.ಇಷ್ಟು ದಿನ ಕರ್ನಾಟಕ ಕುರುಕ್ಷೇತ್ರದಲ್ಲಿ ಸದ್ದು ಮಾಡ್ತಾ ಇದ್ದದ್ದು 40% ಕಮಿಷನ್, ಲಿಂಗಾಯತ ಯುದ್ಧ, ಮೀಸಲಾತಿ ಸಮರ, ಜಾತಿ ಲೆಕ್ಕಾಚಾರ ಮತ್ತು ಗ್ಯಾರಂಟಿ ಘೋಷಣೆಗಳು. ಆದರೆ ಚುನಾವಣಾ ದಿನ ಹತ್ತಿರ ಬರುತ್ತಿದ ಹಾಗೇ ರಕ್ತಪ್ರತಿಜ್ಞೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಸೋಲು-ಗೆಲುವಿನ ಅಖಾಡದಲ್ಲಿ ಏನಿದು ರಕ್ತ ರಾಜಕೀಯ..? ಈ ವಿಡಿಯೋ ನೋಡಿ