ದೀಪಾ ಗೆಟಪ್‌ ಯಾವಾಗ ಚೇಂಜ್ ಆಗತ್ತೆ? ವೀಕ್ಷಕರ ಪ್ರಶ್ನೆಗೆ ಲೈವ್‌ನಲ್ಲಿ ಬಂದು ಉತ್ತರ ಕೊಟ್ಟೇ ಬಿಟ್ಲು!

By Suchethana D  |  First Published Nov 25, 2024, 7:21 PM IST

ಬ್ರಹ್ಮಗಂಟು ದೀಪಾಳ ಗೆಟಪ್‌ ಅನ್ನು ಪ್ಲೀಸ್‌ ಚೇಂಜ್‌ ಮಾಡಿ ಅಂತಿರೋ ವೀಕ್ಷಕರಿಗೆ ನಟಿ ದಿಯಾ ನೇರಪ್ರಸಾರದಲ್ಲಿ ಹೇಳಿದ್ದೇನು? 
 


ಬ್ರಹ್ಮಗಂಟು ಸೀರಿಯಲ್‌ನಲ್ಲಿ ವೀಕ್ಷಕರೆಲ್ಲರೂ ಜೊತೆ ನೆಟ್ಟಿಗರೆಲ್ಲರೂ ಕೇಳುವ ಪ್ರಶ್ನೆ ಒಂದೇ, ದೀಪಾಳ ಗೆಟಪ್‌ ಯಾವಾಗ ಚೇಂಜ್‌ ಆಗತ್ತೆ ಎಂದು. ಅದು ಚೇಂಜ್‌ ಆಗತ್ತಾ? ಖುದ್ದು ನಟಿಯೇ ಉತ್ತರ ಕೊಟ್ಟಿದ್ದಾರೆ. ಸೌಂದರ್ಯ, ಚಿರು ಮತ್ತು ದೀಪಾ ಪಾತ್ರಧಾರಿಗಳಾಗಿರುವ ನೇರಪ್ರಸಾರದಲ್ಲಿ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ದೀಪಾ ಮತ್ತು ಸೌಂದರ್ಯ ಅರ್ಥಾತ್‌ ನಟಿಯರಾದ ಪ್ರೀತಿ ಮತ್ತು ದಿಯಾ ಪಾಲಕ್ಕಲ್  ಉತ್ತರ ಕೊಟ್ಟಿದ್ದಾರೆ. ದೀಪಾ ಪಾತ್ರಧಾರಿಯಾಗಿರುವ ದಿಯಾ ಪಾಲಕ್ಕಲ್  ಅವರು ಸೀರಿಯಲ್​ನಲ್ಲಿ ಎಷ್ಟು ಆಂತರಿಕವಾಗಿ ಸುಂದರಿಯಾಗಿದ್ದಾರೋ, ನಿಜ ಜೀವನದಲ್ಲಿ ಬಾಹ್ಯ ಸೌಂದರ್ಯವೂ ಅವರದ್ದು. ಆದರೆ ಸೀರಿಯಲ್​ ಪಾತ್ರಕ್ಕೆ ತಕ್ಕಂತೆ ಆಕೆಗೆ ಮೇಕಪ್​ ಮಾಡುವ ಮೂಲಕ ಎಷ್ಟು ಕೆಟ್ಟಿದ್ದಾಗಿ ತೋರಿಸಲು ಸಾಧ್ಯವೋ ಅಷ್ಟು ತೋರಿಸಲಾಗುತ್ತಿದೆ. ಆದರೆ ಈಕೆಯ ಒಳ್ಳೆಯತನದ ಮುಂದೆ ಧಾರಾವಾಹಿಯಲ್ಲಿ ಸೌಂದರ್ಯ ವೀಕ್ಷಕರಿಗೆ ಗಣನೆಗೆ ಬರುವುದೇ ಇಲ್ಲ.  ಇದು ದಿಯಾ ಕಥೆಯಾದ್ರೆ ದೀಪಾಳನ್ನು ಕೂಡ ಸುಂದರಿಯಾಗಿ ಕಾಣುವ ತವಕದಲ್ಲಿ ವೀಕ್ಷಕರು ಇದ್ದಾರೆ.

ಅವರಿಗೆ ಸದ್ಯದಲ್ಲಿಯೇ ಗುಡ್‌ ನ್ಯೂಸ್ ಕೊಡುವ ಸಾಧ್ಯತೆ ಇದೆ ದೀಪಾ. ಇದನ್ನೇ ನೇರಪ್ರಸಾರದಲ್ಲಿ ನಟಿಯರು ಹೇಳಿದ್ದಾರೆ. ಈಗ ನೀವು ಒಂದು ಸರ್‍‌ಪ್ರೈಸ್‌ ಅಂತೂ ನೋಡುತ್ತಿದ್ದೀರಿ. ದೀಪಾ vs ಸೌಂದರ್ಯ ಆಗಿದೆ. ದೀಪಾ ಬದಲಾಗಿದ್ದಾಳೆ. ಸಿಡಿದು ಬಿದ್ದಿದ್ದಾಳೆ. ಇಲ್ಲಿಯವರೆಗೆ ಎಲ್ಲಾ ಸಹಿಸಿಕೊಂಡು ಇದ್ದಳು, ಅದು ಅಪ್ಪ- ಅಮ್ಮನ ಸಲುವಾಗಿ. ಆದರೆ ಈಗ, ಅಪ್ಪ-ಅಮ್ಮನಿಗೆ ಅವಮಾನ ಆಗಿದೆ. ನಾನಿಲ್ಲಿ ಚೆನ್ನಾಗಿಲ್ಲ ಎನ್ನುವುದೂ ಅವರಿಗೆ ತಿಳಿದೆ. ಅದೇ ಕಾರಣಕ್ಕೆ ಸೌಂದರ್ಯಳನ್ನೂ ಎದುರು ಹಾಕಿಕೊಂಡಿದ್ದಾಳೆ ದೀಪಾ. ಇದನ್ನು ನೋಡಿ ವೀಕ್ಷಕರಿಗೂ ಸಕತ್‌ ಖುಷಿಯಾಗಿದೆ. ದೀಪಾಳ ಬದಲಾವಣೆಗೆ ಖುಷಿ ಪಟ್ಟುಕೊಂಡಿದ್ದಾರೆ. ಇನ್ನು ಮುಂದೆ ವೀಕ್ಷಕರ ಆಸೆಯಂತೆ ದೀಪಾ ಗೆಟಪ್‌ನಲ್ಲಿಯೂ   ಇನ್ನೊಂದು ಸರ್‍‌ಪ್ರೈಸ್‌ ಇದೆ. ನೋಡಿ ಈ ದೀಪನ ಅವತಾರ ಬದಲಾಗುತ್ತೋ ಇಲವೋ ಅಂತ ಎನ್ನುವ ಮೂಲಕ ಗೆಟಪ್‌ ಬದಲಾವಣೆ ಬಗ್ಗೆಯೂ ನಟಿ ಮಾತನಾಡಿದ್ದಾರೆ.

Tap to resize

Latest Videos

undefined

ನನ್ನ ರಿಯಲ್‌ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್‌ ತಗೊಂಡ್‌ ಬರುತ್ತಿದ್ದಳು ಅಷ್ಟೇ!

ಸೌಂದರ್ಯ ಪಾತ್ರಧಾರಿ ಪ್ರೀತಿ ಕೂಡ ಇದನ್ನೇ ಹೇಳಿದ್ದಾರೆ. ದೀಪಾ ರಿಯಲ್‌ ಲೈಫ್‌ನಲ್ಲಿ ತುಂಬಾ ಸುಂದರಿ. ಪಾಪ ಪಾತ್ರಕ್ಕಾಗಿ ಹೀಗೆ ಮೇಕಪ್‌ ಮಾಡಲಾಗಿದೆ. ಆದರೆ ನಿಮ್ಮ ಆಸೆ ಶೀಘ್ರ ನೆರವೇರತ್ತಾ ನೋಡಿ ಎನ್ನುವ ಮೂಲಕ ಅವರು ದೀಪಾಳ ಗೆಟಪ್‌ ಚೇಂಜ್ ಆಗುವ ಬಗ್ಗೆ ಹಿಂಟ್‌ ಕೊಟ್ಟಿದ್ದಾರೆ. ಅದೇ ವೇಳೆ ದೀಪಾಳ ಬದಲಾಗಿರುವ ಗುಣದ ಬಗ್ಗೆ ಮಾತನಾಡಿದ ನಟಿ ದಿಯಾ, ಹೆಣ್ಣು ಸಹನಾಮೂರ್ತಿ ಎನ್ನುವ ಪಟ್ಟ ಕಟ್ಟಿಕೊಂಡು ಅದೆಷ್ಟೋ ಬಾರಿ ಸಹನೆಯಿಂದ ವರ್ತಿಸುವುದು ಇದೆ. ಆದರೆ ತಾಳ್ಮೆ ಮಿತಿಮೀರಿದರೆ ಅವಳೂ ಸಿಡಿದೇಳಲೇಬೇಕು.  ರಿಯಲ್‌ ದೀಪಾಗಳಿಗೂ ಇದನ್ನೇ ಹೇಳುತ್ತಿದ್ದೇನೆ. ದೌರ್ಜನ್ಯ ಸಹಿಸಿಕೊಳ್ಳಬೇಡಿ. ನಿಮ್ಮ ಕಾಲ ಮೇಲೆ ನೀವು ನಿಲ್ಲುವುದನ್ನು ಕಲಿಯಿರಿ. ಜೊತೆಗೆ ದೌರ್ಜನ್ಯ ಮಿತಿ ಮೀರಿದರೆ ಸಿಡಿದೇಳಿ ಎಂದಿದ್ದಾರೆ. 

ಅಂದಹಾಗೆ, ಈ ಸೀರಿಯಲ್‌ನಲ್ಲಿ ದೀಪಾಳಿಗೆ ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್​, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್​.... ಹಾಕಲಾಗಿದೆ.  ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.

ಕೊನೆಗೂ ಆ ದಿನ ಬಂದೇ ಬಿಡ್ತು! ದೀಪಾ ಒದ್ದಿದ್ದು ಸೇರನ್ನಲ್ಲ, ಸೌಂದರ್ಯಳ ಅಹಂ ಎಂಬ ಕೋಟೆಯನ್ನು

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!