ಪತಿಯ ಪರ ಮತಬೇಟೆಗಿಳಿದ ಉಷಾ ಶಿವಕುಮಾರ್

Apr 25, 2023, 1:39 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್  ಮತಬೇಟೆಗಿಳಿದಿದ್ದಾರೆ.  ಡಿಕೆ ಶಿ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಮೂಲಕ  ಕನಕಪುರದ ಜನತೆಗೆ ಆಶ್ಚರ್ಯವಾಗಿದೆ.  ಅವರು ಪತಿಯೊಂದಿಗೆ ದೇವಸ್ಥಾನಕ್ಕೆ  ಭೇಟಿ ನೀಡಿದಾಗ ಮಾತ್ರ ಮಾಧ್ಯಮದ ಕಣ್ಣಿಗೆ ಕಾಣಸಿಗುತ್ತಿದ್ದರು. ಇಂದು ಪತಿಯ ಪರವಾಗಿ ಕನಕಪುರದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಿದರು. ಅದಲ್ಲದೆ ಕನಕಪುರದ ಜನರೆಲ್ಲ ಬೀದಿಗಳಲ್ಲಿ ಮತ ಕೇಳುತ್ತಾ ಅಲೆಯುತ್ತಿರುವ ಉಷಾರನ್ನು ಕಂಡು ಅವರಿಗೆ ಹಾರ ಹಾಕಿ ಅಭಿಮಾನ ವ್ಯಕ್ತ ಪಡಿಸಿದರು.