ಬಿಗ್ ಬಾಸ್ ಸೀಸನ್ 10 (Bigg Boss Season 10) ರ ಖ್ಯಾತಿಯ ಸ್ಪರ್ಧಿ ಹಾಗೂ ನಟಿ ಸಂಗೀತ ಶೃಂಗೇರಿಯವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸಂಗೀತ ಶೃಂಗೇರಿಯವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಗೀತ ಶೃಂಗೇರಿ (Sangeetha Sringeri) ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಒಂದು ಸಲ ತಮ್ಮ ಮೆಡಿಟೇಶನ್ ವಿಚಾರವಾಗಿ, ತಮ್ಮ ಟ್ರಾವೆಲ್ ಫೊಟೊಗಳನ್ನು, ತಮ್ಮ ಫೋಟೊ ಶೂಟ್ ಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್ ಮಿಡೀಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದರು. ಇದೀಗ ವಿಶೇಷ ಕಾರಣದಿಂದ ಸುದ್ದಿಯಾಗಿದ್ದಾರೆ.
ಪುನೀತ್ ರಾಜಕುಮಾರ್ (Puneeth Rajkumar) ಮೂರನೇ ವರ್ಷದ ಪುಣ್ಯ ಸ್ಮರಣಾರ್ಥದ ಸಂದರ್ಭದಲ್ಲಿ ಅಪ್ಪು ಸಮಾಧಿಗೆ ಭೇಟಿ ನೀಡಿದ ಸಂಗೀತ ಶೃಂಗೇರಿ, ಅಲ್ಲಿ ಪೂಜೆ ಸಲ್ಲಿಸಿ, ಬಳಿಕ ಅಲ್ಲಿ ನೆರೆದ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ. ಇದರ ಫೋಟೊ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಪ್ಪು ಸಮಾಧಿಯ ಸುತ್ತ ಸೇರಿಕೊಂಡಿರುವ ಅಭಿಮಾನಿಗಳಿಗೆ ತಾವೇ ಆಹಾರವನ್ನು ಬಡಿಸಿ ಸಂಗೀತ ಸರ್ವ್ ಮಾಡಿದ್ದಾರೆ. ಜೊತೆಗೆ ಅಲ್ಲಿ ನೆರೆದ ಅಭಿಮಾನಿಗಳ ಜೊತೆಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಸಂಗೀತ ಶೃಂಗೇರಿ ಫೋಟೊ ವೈರಲ್ ಆಗ್ತಿವೆ.
ಸಂಗೀತ ಶೃಂಗೇರಿ ಫೋಟೊ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ನಿಮ್ಮಿಂದ ಮತ್ತಷ್ಟು ಸಮಾಜ ಸೇವೆ ಆಗಲಿ ಎಂದು ಹೇಳ್ತಿದ್ದಾರೆ. ಅಷ್ಟೇ ಅಲ್ಲ ನೀವು ಜನರಿಗೆ ನಿಜವಾದ ಪ್ರೇರಣೆ ಎಂದು ಹೇಳಿದ್ದಾರೆ.
ಜೊತೆಗೆ ಪುನೀತ್ ರಾಜಕುಮಾರ್ ಮತ್ತು ಸಂಗೀತ ಶೃಂಗೇರಿ ಇಬ್ಬರದ್ದೂ ಶುದ್ಧ ಮನಸ್ಸಿನ ಜೀವಗಳು, ನಿಮ್ಮ ಕಾರ್ಯ ಶ್ಲಾಘನೀಯ, ಅಪ್ಪು ಸರ್ ಅವರ ವ್ಯಕ್ತಿತ್ವ ಸಮಾಜಸೇವೆ ಎಲ್ಲರಿಗೂ ಮಾದರಿ. ಅವರ ನೆನಪು ಸದಾ ಶಾಶ್ವತ ಅವರ ನೆನಪಿನಲ್ಲಿ ಈ ದಿನ ನೀವು ಅನ್ನದಾನ ಮಾಡಿರುವುದು ಅಪ್ಪು ಸರ್ ಅವರಿಗೆ ಅವರ ಕನಸಿಗೆ ಗೌರವ ಕೊಟ್ಟ ಹಾಗೆ ಇದೆ ಇದೆ ರೀತಿ ನಿಮ್ಮ ಸಮಾಜ ಸೇವೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ.
ಮಗುವಿನಂತೆ ಮನಸು ಇರೋರು ನಮ್ಮ ಹುಡುಗಿ ಅಂದಿದ್ದಾರೆ ಕೆಲವರು, ಮತ್ತೆ ಕೆಲವರು ಅಪ್ಪು ಮತ್ತು ಸಂಗೀತಾ ಇಬ್ಬರೂ ಜನಮನ ಗೆದ್ದಿದ್ದು ತಮ್ಮ ಪರ್ಸನಾಲಿಟಿಯಿಂದ ಅಂತಾನೂ ಹೇಳಿದ್ದಾರೆ. ಸೆಲೆಬ್ರಿಟಿ ಅನ್ನೋದು ನಟನೆಯಲ್ಲಿ ಇರೋದಿಲ್ಲ, ಮಾಡೊ ಕೆಲಸದಲ್ಲಿರುತ್ತೆ. ನಿಮ್ಮ ಕೆಲಸ ನೋಡಿ ಖುಷಿ ಆಯ್ತು ದೇವರು ಚೆನ್ನಾಗಿ ಇಟ್ಟಿರ್ಲಿ ಅಂತಾನೂ ಹೇಳಿದ್ದಾರೆ.