ಗೋವಾದಿಂದ ಮದ್ಯ ತರಿಸಿಕೊಂಡು ನಗರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕತ್ರಿಗುಪ್ಪೆಯ ಪುರುಷೋತ್ತಮ್ ಬಂಧಿತನಾಗಿದ್ದು, ಈತನಿಂದ ₹5 ಲಕ್ಷ ಮೌಲ್ಯದ 151 ಲೀಟರ್ ಮದ್ಯದ 144 ಬಾಟಲ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು (ಅ.31): ಗೋವಾದಿಂದ ಮದ್ಯ ತರಿಸಿಕೊಂಡು ನಗರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕತ್ರಿಗುಪ್ಪೆಯ ಪುರುಷೋತ್ತಮ್ ಬಂಧಿತನಾಗಿದ್ದು, ಈತನಿಂದ ₹5 ಲಕ್ಷ ಮೌಲ್ಯದ 151 ಲೀಟರ್ ಮದ್ಯದ 144 ಬಾಟಲ್ ವಶಕ್ಕೆ ಪಡೆಯಲಾಗಿದೆ. ಗೋವಾದಲ್ಲಿ ಮದ್ಯದ ಅಂಗಡಿಗಳಲ್ಲಿ ಇರುವವರ ಸಂಪರ್ಕ ಹೊಂದಿದ್ದ ಈತ ಬಸ್‌ಗಳ ಮೂಲಕ ಮದ್ಯ ತರಿಸಿಕೊಂಡು ಮಾರಾಟ ಮಾಡುತ್ತಿದ್ದ.
ಅ.27ರಂದು ಬನಶಂಕರಿ ಎರಡನೇ ಹಂತದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಪುರುಷೋತ್ತಮ್ ನಿಂತಿದ್ದಾಗ ಆತನ ಚಲನ ವಲನದಿಂದ ಅಬಕಾರಿ ಸಿಬ್ಬಂದಿಗೆ ಅನುಮಾನ ಬಂದು ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ನಂತರ ಮನೆಗೆ ಕರೆದೊಯ್ದು ಶೋಧಿಸಿದಾಗ ಇನ್ನಷ್ಟು ಬಾಟಲ್‌ಗಳು ಸಿಕ್ಕಿವೆ. ಬಾಟಲ್‌ಗಳ ಮೇಲೆ ಗೋವಾದಲ್ಲಿ ಮಾತ್ರ ಮಾರಾಟ ಎಂದು ನಮೂದಾಗಿರುವುದು ಕಂಡುಬಂದಿದೆ. ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತ ಜೆ.ಗಿರಿ, ನಗರ ಜಿಲ್ಲೆ ಉಪ ಆಯುಕ್ತ ಎಂ.ರಂಗಪ್ಪ, ಡಿವೈಎಸ್ಪಿ ರವಿಕುಮಾರ ಮಾರ್ಗದರ್ಶನದಲ್ಲಿ ಬನಶಂಕರಿ ಅಬಕಾರಿ ನಿರೀಕ್ಷಕ ಪಿ.ಜೆ.ಜಾನ್, ಉಪ ನಿರೀಕ್ಷಕ ಪ್ರಶಾಂತ ಹಾಗೂ ಸಿಬ್ಬಂದಿ ಮದ್ಯ ವಶಪಡಿಸಿಕೊಂಡಿಸಿದ್ದಾರೆ.
ಬಾಯಿ ಬಡಿದುಕೊಂಡ್ರೂ ಬಿಜೆಪಿ ಟಿಕೆಟ್‌ಗೆ ಎಚ್‌ಡಿಕೆ ಒಪ್ಪಿರಲಿಲ್ಲ: ಮುಖಾಮುಖಿಯಲ್ಲಿ ಸಿ.ಪಿ.ಯೋಗೇಶ್ವರ್
ದಂಪತಿ ಮೇಲೆ ಪುಂಡರ ಹಲ್ಲೆ: ಸಾರ್ವಜನಿಕ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಪುಂಡರ ಗುಂಪೊಂದು ಬುದ್ಧಿವಾದ ಹೇಳಿದ ದಂಪತಿ ಮೇಲೆ ಚಾಕು, ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿಯ ತುಂಗಾನಗರ ನಿವಾಸಿ ಶಿವಗಂಗೇಗೌಡ(38) ಮತ್ತು ಅವರ ಪತ್ನಿ ಜಯಲಕ್ಷ್ಮೀ(35) ಹಲ್ಲೆ ಒಳಗಾದವರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಗಂಗೇಗೌಡ ನೀಡಿದ ದೂರಿನ ಮೇರೆಗೆ ಧನು, ಆನಂದ, ಸಂಜು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?: ದೂರುದಾರ ಶಿವಗಂಗೇಗೌಡ ತಮ್ಮ ಮನೆ ಬಳಿ ರಸ್ತೆ ಪಕ್ಕದಲ್ಲಿ ತಮ್ಮ ಇನೋವಾ ಕಾರು ಪಾರ್ಕ್ ಮಾಡಿದ್ದರು. ಭಾನುವಾರ ರಾತ್ರಿ ಸುಮಾರು 7ಕ್ಕೆ ಆರೋಪಿಗಳಾದ ಸಂಜು, ಆನಂದ, ಧನು ಕಾರಿನ ಪಕ್ಕದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಿದ್ದರು. ಇದನ್ನು ಮನೆಯ ಕಿಟಕಿಯಿಂದ ನೋಡಿದ ಶಿವಗಂಗೇಗೌಡ, ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದೀರಿ. ಇಲ್ಲಿಂದ ಎದ್ದು ಹೋಗಿ ಎಂದು ಹೇಳಿದ್ದಾರೆ. ಎದ್ದು ಹೋಗುತ್ತೇವೆ ಎಂದ ಆರೋಪಿಗಳು ನಂತರವೂ ಅಲ್ಲಿಯೇ ಕುಳಿತು ಮದ್ಯ ಸೇವನೆ ಮುಂದುವರೆಸಿದ್ದಾರೆ.
ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ಸಿಎಂ ಸಿದ್ದರಾಮಯ್ಯ
ರಾತ್ರಿ ಸುಮಾರು 9ಕ್ಕೆ ಶಿವಗಂಗೇಗೌಡ ತಮ್ಮ ನಾಯಿಯನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಆಗಲೂ ಆರೋಪಿಗಳು ರಸ್ತೆಯಲ್ಲೇ ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಇಲ್ಲಿಂದ ಎದ್ದು ಹೋಗಿ ಎಂದು ಶಿವಗಂಗೇಗೌಡ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೇ ಕೆರಳಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಶಿವಗಂಗೇಗೌಡರನ್ನು ನಿಂದಿಸಿದ್ದಾರೆ. ಈ ವೇಳೆ ಆರೋಪಿ ಯಾರಿಗೋ ಮೊಬೈಲ್ ಕರೆ ಮಾಡಿದ್ದು, ಐದಾರು ಮಂದಿ ಸ್ಥಳಕ್ಕೆ ಬಂದು ಏಕಾಏಕಿ ಜಗಳ ತೆಗೆದಿದ್ದಾರೆ.