Apr 10, 2023, 6:52 PM IST
ಬೆಂಗಳೂರು (ಏ.10): ಬಿಜೆಪಿ ಪಾಲಿಗೆ ಟಿಕೆಟ್ ಹಂಚಿಕೆ ಗಜಪ್ರಸವದ ರೀತಿ ಆಗಿದೆ. ಮೊದಲ ಪಟ್ಟಿಯಲ್ಲಿಯೇ ದಾಖಲೆಯೆ 170 ರಿಂದ 180 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ನಡುವೆ ಟಿಕೆಟ್ ಫೈನಲ್ ಮಾಡುವ ನಿಟ್ಟಿನಲ್ಲಿ ಬಿಜೆಪಿಯ ಮ್ಯಾರಥಾನ್ ಮೀಟಿಂಗ್ ದೆಹಲಿಯಲ್ಲಿ ಮುಂದುವರಿದಿದೆ.
ಒಂದು ಮೂಲಗಳ ಪ್ರಕಾರ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಕ್ರಾಂತಿಕಾರಿ ಬದಲಾವಣೆ ಮಾಡಲಿದೆ ಎನ್ನಲಾಗಿದೆ. ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಮಾಡಿದಂತೆ ಹೊಸ ನಾಯಕರಿಗೆ ಟಿಕೆಟ್ ನೀಡಬೇಕು ಎನ್ನುವ ಒಲವು ಕೇಳಿಬಂದಿದೆ. ಇದಕ್ಕೆ ಇನ್ನೂ ಕೆಲವು ನಾಯಕರು ರಾಜ್ಯದ ರಾಜಕೀಯ ಚಿತ್ರಣ ಬೇರೆ, ಇಲ್ಲಿ ಗುಜರಾತ್, ಯುಪಿ ಮಾದರಿ ವರ್ಕ್ ಆಗೋದಿಲ್ಲ ಎಂದಿದ್ದಾರೆ.
ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ: 40 ಕ್ಷೇತ್ರಗಳಲ್ಲಿ ಮರು ಸರ್ವೇ ಆರಂಭ
ಆದರೆ, ಬಿಜೆಪಿಯ ಒಂದು ವರ್ಗ ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಎಲ್ಲಾ ಕಡೆ ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯೇ ಚರ್ಚೆ ಆಗಬೇಕು. ವಿವಿಧ ಕ್ಷೇತ್ರಗಳ ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಮಾತು ಬಂದಿದೆ. ಹಾಗೇನಾದರೂ ಆದಲ್ಲಿ 30ಕ್ಕೂ ಅಧಿಕ ಶಾಸಕರಿಗೆ ಟಿಕೆಟ್ ತಪ್ಪಿ ಹೋಗಬಹುದು ಎನ್ನಲಾಗಿದೆ.