ದೀಪಾವಳಿ ಸ್ವೀಟ್ ಕೊಟ್ಟ ಭಾರತೀಯರಿಗೆ ಶಾಕ್ ಕೊಟ್ಟ ಚೀನಾ; ನೇಪಾಳದ ನೋಟುಗಳಲ್ಲಿ ಭಾರತದ ಪ್ರದೇಶ?

By Sathish Kumar KHFirst Published Oct 31, 2024, 6:32 PM IST
Highlights

ನೇಪಾಳವು 100 ರೂಪಾಯಿ ನೋಟುಗಳನ್ನು ಮುದ್ರಿಸಲು ಚೀನಾದ ಕಂಪನಿಗೆ ಟೆಂಡರ್ ನೀಡಿದೆ. ಈ ನೋಟುಗಳಲ್ಲಿ ಭಾರತದ ಲಿಪುಲೇಖ್, ಲಿಂಪಿಯಾಧುರ ಮತ್ತು ಕಾಲಾಪಾನಿ ಪ್ರದೇಶಗಳನ್ನು ನೇಪಾಳದ ನಕ್ಷೆಯಲ್ಲಿ ತೋರಿಸಲಾಗಿದೆ, ಇದು ವಿವಾದಕ್ಕೆ ಕಾರಣವಾಗಬಹುದು.

ನವದೆಹಲಿ (ಅ.31): ನೇಪಾಳವು 100 ರೂಪಾಯಿ ನೋಟುಗಳನ್ನು ಮುದ್ರಿಸಲು ಚೀನಾದ ಕಂಪನಿಗೆ ಟೆಂಡರ್ ನೀಡಿದೆ. ಈ ನೋಟುಗಳಲ್ಲಿ ಭಾರತದ ಲಿಪುಲೇಖ್, ಲಿಂಪಿಯಾಧುರ ಮತ್ತು ಕಾಲಾಪಾನಿ ಪ್ರದೇಶಗಳನ್ನು ನೇಪಾಳದ ನಕ್ಷೆಯಲ್ಲಿ ತೋರಿಸಲಾಗಿದೆ, ಇದು ವಿವಾದಕ್ಕೆ ಕಾರಣವಾಗಬಹುದು.

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯ ಯೋಧರು ಗಡಿಯಲ್ಲಿ ಚೀನಾದ ಯೋಧರಿಗೆ ಸಿಹಿಯನ್ನು ಹಂಚಿ ಹಬ್ಬದ ಖುಷಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಅತ್ತ ಕುತಂತ್ರ ಬುದ್ಧಿಯುಳ್ಳವರು ಚೀನೀಯರು ಭಾರತದ ಭೂ ಭಾಗಗಳನ್ನು ನೇಪಾಳದ ನೋಟಿನಲ್ಲಿ ಮುದ್ರಿಸಿ ದೀಪಾವಳಿ ಹಬ್ಬದ ವೇಳೆಯೇ ಶಾಕ್ ನೀಡಿದೆ. ಭಾರತದ ಭೂ ಭಾಗಗಳನ್ನು ಕಬಳಿಸಲು ಹವಣಿಸುತ್ತಿರುವ ಚೀನಾ ಹಲವು ಬಾರಿ ಕಾಲು ಕೆರೆದುಕೊಂಡು ಭೂ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಆದರೆ, ಭಾರತೀಯ ಯೋಧರು ಕೂಡ ಚೀನೀಯರನ್ನು ಹಿಮ್ಮೆಟ್ಟಿಸಿದ್ದಾರೆ. ಆದರೆ, ಇದೀಗ ಜಾಗತಿಕ ಮಟ್ಟದಲ್ಲಿ ತಿಳಿಯುವಂತೆ ಭಾರತದ ಭೂ ಪ್ರದೇಶಗಳನ್ನು ನೇಪಾಳದ ನೋಟುಗಳನ್ನು ಮುದ್ರಿಸಿ ಭಾರತದಿಂದ ಭೂಮಿಯನ್ನು ಕಸಿದುಕೊಳ್ಳಲು ಕುತಂತ್ರ ಮಾಡಿದೆ.

Latest Videos

ಇದನ್ನೂ ಓದಿ: ಗಡಿಯಲ್ಲಿ ದೀಪಾವಳಿ ಆಚರಣೆ, ಚೀನಾ ಸೈನಿಕರಿಗೆ ಸಿಹಿ ಹಂಚಿದ ಭಾರತೀಯ ಯೋಧರು!

ನೇಪಾಳದ ನೋಟುಗಳನ್ನು ಮುದ್ರಿಸಲು ಟೆಂಡರ್ ಪಡೆದುಕೊಳ್ಳುವ ಚೀನಾ: ಭಾರತದ ನೆರೆಹೊರೆಉ ಹಿಂದೂ ಬಾಹುಳ್ಯ ದೇಶವಾಗಿರುವ ನೇಪಾಳದ ನೋಟುಗಳನ್ನು ಮುದ್ರಣ ಮಾಡುವುದಕ್ಕೆ ಚೀನಾಗೆ ಟೆಂಡರ್ ನೀಡಲಾಗುತ್ತದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಚೀನಾ ನೇಪಾಳದ ನೋಟುಗಳಲ್ಲಿ 3 ಪ್ರದೇಶಗಳನ್ನು ಮುದ್ರಣ ಮಾಡಿದೆ. ಒಂದೆಡೆ ಎಲ್‌ಎಸಿಯಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಮತ್ತೊಂದೆಡೆ ನೇಪಾಳದ ಮೂಲಕ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದೆ. ನೇಪಾಳವು 100 ರೂಪಾಯಿ ನೋಟುಗಳ ಮುದ್ರಣಕ್ಕಾಗಿ ಚೀನಾದ ಕಂಪನಿಗೆ ಟೆಂಡರ್ ನೀಡಿದೆ. ಆ ನೋಟಿನಲ್ಲಿ ನೇಪಾಳದ ನಕ್ಷೆಯಲ್ಲಿ ಭಾರತದ ಮೂರು ಪ್ರದೇಶಗಳನ್ನು ಸೇರಿಸಲಾಗಿದೆ.

ಭಾರತದ ಈ ಭಾಗಗಳನ್ನು ತನ್ನದೆಂದ ನೇಪಾಳ :  ಇನ್ನು ಅಂತಾರಾಷ್ಟ್ರೀಯ ವರದಿಯ ಪ್ರಕಾರ, ನೇಪಾಳದಲ್ಲಿ ಅಧಿಕಾರದಲ್ಲಿರುವ ನೇಪಾಳ ರಾಷ್ಟ್ರೀಯ ಬ್ಯಾಂಕ್ ಚೀನಾದ ಕಂಪನಿಗೆ 100 ರೂಪಾಯಿ ನೇಪಾಳಿ ನೋಟುಗಳನ್ನು ಮುದ್ರಿಸಲು ಟೆಂಡರ್ ನೀಡಿದೆ. ನೇಪಾಳ ರಾಷ್ಟ್ರೀಯ ಬ್ಯಾಂಕ್ ಇಲ್ಲಿನ ಕೇಂದ್ರ ಬ್ಯಾಂಕ್ ಆಗಿದೆ. ಈ ನೋಟುಗಳಲ್ಲಿ ನೇಪಾಳದ ನಕ್ಷೆ ಇರುತ್ತದೆ. ಆದರೆ, ನಕ್ಷೆಯಲ್ಲಿ ಭಾರತದ ಮೂರು ಪ್ರದೇಶಗಳನ್ನು ನೇಪಾಳ ತನ್ನದೆಂದು ಹೇಳಿಕೊಂಡಿದೆ. ನೇಪಾಳದ ನೋಟುಗಳಲ್ಲಿ ಭಾರತದ ಲಿಪುಲೇಖ್, ಲಿಂಪಿಯಾಧುರ, ಕಾಲಾಪಾನಿ ಪ್ರದೇಶಗಳನ್ನು ನೇಪಾಳದ ನಕ್ಷೆಯಲ್ಲಿ ತೋರಿಸಲಾಗಿದೆ.

click me!