May 12, 2023, 2:48 PM IST
ಬೆಂಗಳೂರು (ಮೇ 12): ಕರ್ನಾಟಕದಲ್ಲಿ ಎಲೆಕ್ಷನ್ ಯುದ್ಧ ಮುಗಿದಿದೆ. ಶಾಸಕರಾಗೋಕೆ, ಮುಖ್ಯಮಂತ್ರಿಯಾಗೋಕೆ, ಉಪಮುಖ್ಯಮಂತ್ರಿಯಾಗೋಕೆ, ಸಚಿವರಾಗೋಕೆ ಅದೃಷ್ಟ ಪರೀಕ್ಷೆಗೆ ಇಳಿದಿರೋ ಅಭ್ಯರ್ಥಿಗಳ ಭವಿಷ್ಯ ಇವಿಎಂ ಪೆಟ್ಟಿಗೆ ಒಳಗೆ ಬೆಚ್ಚನೆ ಕೂತಿದೆ. ಕೆಲವು ಕಡೆ ಇಂಥವರೇ ಗೆಲ್ತಾರೆ, ಇವರು ಸೋಲ್ತಾರೆ ಅನ್ನೋದು ಬಹುತೇಕ ಪಕ್ಕಾ ಅನಿಸಿದ್ರೂ ಕೂಡ ಲಾಸ್ಟ್ ಮೂಮೆಂಟ್ ಮಿರಾಕಲ್ಗೆ ಕಾಯೋ ಥರ ಆಗಿದೆ. ಆದ್ರೆ ಇಲ್ಲಿ ನಾವು ಪಟ್ಟಿ ಮಾಡಿಕೊಂಡು ಬಂದಿರೋ 11 ಕ್ಷೇತ್ರಗಳು ಯಾರ ಊಹೆಗೂ ಸಿಗೋಕೆ ಚಾನ್ಸೇ ಇಲ್ಲ. ಬನ್ನಿ ಹಾಗಾದ್ರೆ ಇಡೀ ರಾಜ್ಯದ ಗಮನ ಸೆಳೆದಿರೋ 11 ಕ್ಷೇತ್ರಗಳ ಬಗ್ಗೆ ನೋಡೋಣ.
ಈ ಕ್ಷೇತ್ರಗಳಲ್ಲಿ ಗೆಲುವು ಸೋಲಿನ ಲೆಕ್ಕಾಚಾರ ಸುಲಭವಿಲ್ಲಾ.. ಟ್ರೆಂಡ್ ಹಿಂಗೇ ಇದೆ ಅನ್ನೋದನ್ನ ಊಹಿಸೋಕೆ ಆಗ್ತಿಲ್ಲಾ.. ಬಿಗ್ ಮಾರ್ಜಿನ್ ಇಂದ ಯಾರಾದ್ರೂ ಗೆಲ್ತಾರಾ ಅಂದ್ರೆ ಅದಕ್ಕೂ ಊಹೂಂ ಅನ್ನಬೇಕು. ಇಲ್ಲಿ ಕಾಣಸಿಗೋದು ಮದಗಜಗಳ ಕಾಳಗ.. ಇಲ್ಲಿರೋದು ಬಂಡಾಯ. ಇಲ್ಲಿರೋದು ಜಾತಿ ಲೆಕ್ಕಾಚಾರ.. ಇಲ್ಲಿರೋದು ಗೆಲ್ಲಲೇ ಬೇಕು ಅನ್ನೋ ರಣತಂತ್ರ. ಕ್ಷೇತ್ರಗಳಲ್ಲಿ ಗೆಲುವು ಸೋಲಿನ ಲೆಕ್ಕಾಚಾರ ಸುಲಭವಿಲ್ಲಾ.. ಟ್ರೆಂಡ್ ಹಿಂಗೇ ಇದೆ ಅನ್ನೋದನ್ನ ಊಹಿಸೋಕೆ ಆಗ್ತಿಲ್ಲಾ.. ಬಿಗ್ ಮಾರ್ಜಿನ್ ಇಂದ ಯಾರಾದ್ರೂ ಗೆಲ್ತಾರಾ ಅಂದ್ರೆ ಅದಕ್ಕೂ ಊಹೂಂ ಅನ್ನಬೇಕು. ಇಲ್ಲಿ ಕಾಣಸಿಗೋದು ಮದಗಜಗಳ ಕಾಳಗ..